ಪ್ರೇತ ಉಚ್ಛಾಟನೆ ದೌರ್ಜನ್ಯ ವಿಡಿಯೋ ವೈರಲ್

blank

ಮಂಗಳೂರು: ಮೂಢನಂಬಿಕೆಗೆ ಪ್ರಚೋದನೆ ನೀಡುವಂತಹ ಪ್ರೇತ ಉಚ್ಛಾಟನೆಯ ಹೆಸರಿನಲ್ಲಿ ಯುವಕನೊಬ್ಬನ ಮೇಲೆ ಅಮಾನವೀಯವಾಗಿ ದೌರ್ಜನ್ಯನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

blank

ಬ್ರಹ್ಮರಾಕ್ಷಸನೆಂದು ಹೇಳಿ ಯುವಕನ ಮೇಲೆ ಆವೇಶ ಬಂದಿದ್ದು, ಈ ಸಂದರ್ಭ ಮಂತ್ರವಾದಿಯೆಂದು ಹೇಳಿಕೊಂಡು ವ್ಯಕ್ತಿ ಉಚ್ಛಾಟನೆ ಮಾಡುವ ದೃಶ್ಯವಿದೆ. ಆವೇಶ ಭರಿತ ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಳಿಕ ಯುವಕನ ಸಂಬಂಧಿಕರ ಮೂಲಕ ಬೆತ್ತದಿಂದ ಯುವಕನಿಗೆ ಹಲ್ಲೆ ನಡೆಸುವ, ಕರ್ಪೂರವನ್ನು ಕೈಗೆ ಇಟ್ಟು ಉರಿಸುವ ದೃಶ್ಯವಿದೆ. ಈ ಮಧ್ಯೆ ಸಹೋದರರು ಹೊ-ಕೈ ನಡೆಸುವ ದೃಶ್ಯಗಳೂ ವಿಡಿಯೋದಲ್ಲಿ ಸೆರೆಯಾಗಿದೆ.

ಸುಮಾರು 15 ನಿಮಿಷಗಳ ವಿಡಿಯೋದುದ್ದಕ್ಕೂ ಮೂಢನಂಬಿಕೆಗೆ ಪ್ರಚೋದನೆ ನೀಡುವ ಕೃತ್ಯಗಳು ಸಾಬೀತಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ. ಆದರೆ ಈ ಘಟನೆ ಯಾವಾಗ? ಎಲ್ಲಿ ನಡೆದದ್ದು ಎಂಬ ಬಗ್ಗೆ ಮಾಹಿತಿಯಿಲ್ಲ. ತುಳುವಿನಲ್ಲೇ ಸಂಭಾಷಣೆ ಇರುವ ಕಾರಣ ಕರಾವಳಿ ಜಿಲ್ಲೆಯಲ್ಲೇ ಇದು ನಡೆದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Share This Article

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…