More

    ಆರು ವರ್ಷಗಳ ಹಿಂದಿನ ಚಿತ್ರಕ್ಕೆ ಕೊನೆಗೂ ಸಿಗ್ತು ಬಿಡುಗಡೆಯ ಭಾಗ್ಯ!

    ಆರು ವರ್ಷಗಳ ಹಿಂದಿನ ಮಾತು. ನವಾಜುದ್ದೀನ್ ಸಿದ್ದೀಕಿ ಆಗಿನ್ನೂ ಸೂಪರ್ ಸ್ಟಾರ್ ಆಗಿರಲಿಲ್ಲ. ಆಗಷ್ಟೇ ಅವರು ‘ದಿ ಲಂಚ್ ಬಾಕ್ಸ್’, ‘ಗ್ಯಾಂಗ್ಸ್ ಆಫ್​ ವಸ್ಸೇಪುರ್’, ‘ಬಾಂಬೆ ಟಾಕೀಸ್’ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗುತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ಹೀರೋ ಆಗುವ ಅವಕಾಶ ಸಿಕ್ಕಿತು. ಅದೇ ‘ಘೂಮಕೇತು’. ಆಗ ಶುರುವಾದ ಚಿತ್ರಕ್ಕೆ ಈಗ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ.

    ಇದನ್ನೂ ಓದಿ: 20 ವರ್ಷದ ಹಿಂದಿನ ಫೋಟೋದಲ್ಲಿ ಆಮೀರ್​- ದೀಪಿಕಾ ಹೇಗಿದ್ರು?

    ಹೌದು, ನವಾಜುದ್ದೀನ್ ಸಿದ್ದೀಕಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ ‘ಘೂಮಕೇತು’, ಇದೇ ಮೇ 22ರಂದು ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಗಳು ಬಂದ್ ಆಗಿರುವಾಗ, ಈ ಚಿತ್ರ ಬಿಡುಗಡೆ ಹೇಗೆ ಎಂಬ ಪ್ರಶ್ನೆ ಬೇಡ. ‘ಘೂಮಕೇತು’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ, ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಜೀ5ನಲ್ಲಿ ಇದೇ ಮೇ 22ರಂದು ಚಿತ್ರ ಪ್ರೀಮಿಯರ್ ಆಗಲಿದೆ.

    ‘ಘೂಮಕೇತು’ 2014ರಲ್ಲೇ ಮುಗಿದಿತ್ತು. ಈ ಚಿತ್ರವನ್ನು ನಿರ್ಮಿಸಿದ್ದು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ವಿಕಾಸ್ ಬಹ್ಲ್​. ಚಿತ್ರ ಯಾವುದೇ ಸಮಸ್ಯೆ ಇಲ್ಲದೆ ಮುಕ್ತಾಯವೇನೋ ಆಯಿತು. ಆದರೆ, ಚಿತ್ರತಂಡದವರಿಗೆ ಬಿಡುಗಡೆ ಮಾಡುವುದಕ್ಕೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. 2018ರಲ್ಲೊಮ್ಮೆ ಚಿತ್ರ ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾಗಿತ್ತು. ಆದರೆ, ಏನೋ ಸಮಸ್ಯೆ ಎದುರಾಗಿ, ಆಗಲೂ ಬಿಡುಗಡೆಯಾಗಿರಲಿಲ್ಲ. ಈಗ ಚಿತ್ರಕ್ಕೆ ಬಿಡುಗಡೆ ಸಿಕ್ಕಿದೆ.

    ಇದನ್ನೂ ಓದಿ: ‘ಆರ್‌ಆರ್‌ಆರ್’ ಅಭಿಮಾನಿಗಳಿಗೆ ಮತ್ತೆ ನಿರಾಸೆ … ಸಂಕ್ರಾಂತಿಗೆ ಚಿತ್ರ ಬಿಡುಗಡೆ ಕಷ್ಟ

    ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ನವಾಜುದ್ದೀನ್ ಜತೆಗೆ ಅನುರಾಗ್ ಕಶ್ಯಪ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅಮಿತಾಭ್ ಬಚ್ಚನ್, ರಣವೀರ್ ಸಿಂಗ್, ಹ್ಯೂಮಾ ಖುರೇಶಿ, ಚಿತ್ರಾಂಗದ ಸಿಂಗ್, ಸೋನಾಕ್ಷಿ ಸಿನ್ಹಾ ಮುಂತಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಲವ್​ ಮಾಕ್​ಟೇಲ್​ ನಾಯಕನ ಫೇಸ್​ಬುಕ್​ ಪೇಜ್​ ಹ್ಯಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts