More

    ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ಘೇರಾವ್

    ಬ್ಯಾಡಗಿ: ತಾಲೂಕನ್ನು ಬರಗಾಲಪೀಡಿತ ಪಟ್ಟಿಯಲ್ಲಿ ಸೇರಿಸದಿದ್ದರೆ ಅ. 9ರಂದು ನಡೆಯಲಿರುವ ಸರ್ಕಾರಿ ಕಾರ್ಯಕ್ರಮಕ್ಕೆ ಘೕರಾವ್ ಹಾಕಲಾಗುವುದು ಎಂದು ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.

    ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ನಡೆಸುತ್ತಿರುವ ಧರಣಿ 4ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಜಿಲ್ಲೆಯ ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ ತಾಲೂಕುಗಳನ್ನು ಬರಗಾಲ ಪಟ್ಟಿಯಿಂದ ಕೈಬಿಡಲಾಗಿದೆ. ಈ ಹಿಂದೆ ಉಸ್ತುವಾರಿ ಮಂತ್ರಿ, ಶಾಸಕರ ಸರ್ಕಾರಿ ಕಾರ್ಯಕ್ರಮಕ್ಕೆ ಘೕರಾವ್ ಹಾಕಲಾಗುವುದು ಎಂದು ಪ್ರಕಟಿಸಿದ್ದೇವು. ವಾರಗಳ ಗಡುವಿನ ಮೇರೆಗೆ ಕೈಬಿಡಲಾಗಿತ್ತು. ಸೆ. 5ರಿಂದ ಅಹೋರಾತ್ರಿ ಧರಣಿ ಆರಂಭಿಸಿದರೂ ಜನಪ್ರತಿನಿಧಿಗಳು ಹಾಯ್ದಿಲ್ಲ. ಸೆ. 9ರಿಂದ ನಡೆಯುವ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ಸೇರಿ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರು ಸೇರಿ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಬಿಡುವುದಿಲ್ಲ, ಘೕರಾವ್ ಹಾಕಲು ನಿರ್ಧರಿಸಲಾಗಿದೆ ಎಂದರು.

    ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರೈತರು ತೀವ್ರ ಬರಗಾಲಕ್ಕೆ ಸಿಲುಕಿದರೂ ಸರ್ಕಾರ ತಾಲೂಕಿನ ರೈತರ ಬಗ್ಗೆ ಕಣ್ತೆರೆಯುತ್ತಿಲ್ಲ, ಗ್ಯಾರಂಟಿ ಯೋಜನೆಗಳಲ್ಲಿ ಕಾಲಕಳೆಯುವ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ರೈತರು ಆತಂಕದಲ್ಲಿ ಮುಳುಗಿದ್ದು, ಕೂಡಲೇ ಘೊಷಣೆ ಮಾಡಬೇಕು. ರೈತರೊಂದಿಗೆ ನಿರಂತರವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ಅವರು, ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು

    ಗಂಗಣ್ಣ ಎಲಿ, ನಿಂಗಪ್ಪ ಹೆಗ್ಗಣದ, ಚಂದ್ರಶೇಖರ ಉಪ್ಪಿನ, ಶಿವಯೋಗಿ ಗಡಾದ, ಪುಷ್ಪಾ ಹಿರೇಮಠ, ಪುಟ್ಟನಗೌಡ ಪಾಟೀಲ, ರತ್ನಾ ಬಡಿಗೇರ, ರೇವತಿ ಬಾಳಿಕಾಯಿ, ಬಿಜೆಪಿ ತಾಲೂಕಾಧ್ಯಕ್ಷ ಹಾಲೇಶ ಅಂತರವಳ್ಳಿ, ಸುರೇಶ ಯತ್ನಳ್ಳಿ, ಚಂದ್ರಪ್ಪ ಶೆಟ್ಟರ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts