More

    ನೆನಪಿನ ಶಕ್ತಿ, ಜೀರ್ಣಶಕ್ತಿ, ಲೈಂಗಿಕ ಶಕ್ತಿ ಹೆಚ್ಚಿಸುವ ಅಮೃತಸಮಾನ ಪದಾರ್ಥ ತುಪ್ಪ

    04

    ಎಷ್ಟೇ ದೊಡ್ಡ ಸುಳ್ಳಾದರೂ ಪದೇಪದೆ ಹೇಳಿದರೆ ಅದೇ ಸತ್ಯ ಎನಿಸುತ್ತದೆ. ಆಗ ಸತ್ಯವನ್ನು ಹೇಳಿದರೂ ಸುಳ್ಳೆನಿಸುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ತುಪ್ಪ. ‘ನಾನು ತುಪ್ಪವನ್ನು ಮುಟ್ಟುವುದೂ ಇಲ್ಲ’ ಎಂದು ಎಷ್ಟೋ ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ತಾವು ಅಮೃತಸಮಾನವಾದದ್ದನ್ನು ದೂರವಿಡುತ್ತಿದ್ದೇವೆ ಎಂದು ಅವರಿಗೆ ಗೊತ್ತಿಲ್ಲ. ತುಪ್ಪದ ಪ್ರಯೋಜನ, ಬಳಕೆಯ ವಿಧಿ, ಮುನ್ನೆಚ್ಚರಿಕೆಗಳನ್ನು ತಿಳಿಯೋಣ.

    ‘ಶಸ್ತ ಧೀ ಸ್ಮೃತಿ ಮೇಧಾ ಅಗ್ನಿ ಬಲ ಆಯುಃ ಶುಕ್ರ ಚಕ್ಷುಷಾಂ | ಬಾಲ ವೃದ್ಧ ಪ್ರಜಾ ಕಾಂತಿ ಸೌಕುಮಾರ್ಯ ಸ್ವರಾರ್ಥಿನಾಮ್ ||’ ಎನ್ನುತ್ತದೆ ಆಯುರ್ವೆದ. ಅಂದರೆ – ಮನೋಸ್ಥೈರ್ಯ, ನೆನಪಿನ ಶಕ್ತಿ, ಬುದ್ಧಿಶಕ್ತಿ, ಜೀರ್ಣಶಕ್ತಿ, ದೈಹಿಕ ಶಕ್ತಿ, ಲೈಂಗಿಕ ಶಕ್ತಿ, ಉತ್ತಮ ದೃಷ್ಟಿ, ಸಂತಾನ, ಸೌಂದರ್ಯ, ಒಳ್ಳೆಯ ಸ್ವರ ಇಂಥವುಗಳನ್ನು ಇಚ್ಛಿಸುವವರಿಗೆ ತುಪ್ಪ ಪ್ರಶಸ್ತವಾದದ್ದು ಎಂದರ್ಥ. ನಮ್ಮ ಮಿದುಳು ಸುಮಾರು ಮುಕ್ಕಾಲು ಭಾಗ ಕೊಬ್ಬಿನಿಂದಲೇ ಆಗಿದೆ. ಹಾಗಾಗಿ ಅದರ ಪೋಷಣೆ ತುಪ್ಪದಿಂದ ಆಗುತ್ತದೆ. ತುಪ್ಪದ ವಿಶಿಷ್ಟ ಗುಣವೆಂದರೆ ಅದು ಪಿತ್ತವನ್ನು ಕಡಿಮೆ ಮಾಡುತ್ತದೆ. ಆದರೆ ಅಗ್ನಿಬಲವನ್ನು ಹೆಚ್ಚಿಸುತ್ತದೆ. ಹಾಗಾಗಿ ಆಸಿಡಿಟಿ ಸಮಸ್ಯೆ ಇರುವವರಿಗೆ ತುಪ್ಪದ ಬಳಕೆ ತುಂಬ ಸಹಕಾರಿ. ಮಲೆನಾಡಿನ ಹಳ್ಳಿಗಳಲ್ಲಿ ಇಂದಿಗೂ ಊಟದ ಮೊದಲ ತುತ್ತಿಗೆ ತುಸು ತುಪ್ಪವನ್ನು ಹಾಕುವ ಪದ್ಧತಿಯಿದೆ. ಇದರಿಂದಾಗಿ ಜಠರದ ಲೋಳೆ ಪದರಕ್ಕೆ ಪೋಷಣೆ ದೊರೆತು ಅಸಿಡಿಟಿ, ಹೊಟ್ಟೆಯ ಹುಣ್ಣುಗಳು ಆಗುವ ಸಂಭವನೀಯತೆ ಕಡಿಮೆಯಾಗುತ್ತದೆ.

    ತುಪ್ಪವು ಮಿದುಳು, ರಕ್ತ, ಮಾಂಸಖಂಡಗಳು, ಮೂಳೆ, ಚರ್ಮ, ಸಂದುಗಳ ಪೋಷಣೆಗೆ ಸಹಾಯ ಮಾಡುತ್ತದೆ. ತಿನ್ನುವ ಮೂಲಕವಷ್ಟೇ ಅಲ್ಲ, ತುಪ್ಪದ ಬಾಹ್ಯ ಬಳಕೆಯೂ ಪ್ರಯೋಜನಕಾರಿ. ಮುಖಕ್ಕೆ ಆದ ಕಪ್ಪು ಕಲೆಗಳನ್ನು ತೆಗೆಯಲು, ಮುಖದ ಕಾಂತಿ ಹೆಚ್ಚಿಸಲು ಯಾವುದೋ ಕ್ರೀಮ್ಳ ಬಳಕೆಯ ಬದಲು ನಿತ್ಯವೂ ತುಪ್ಪವನ್ನು ಹಚ್ಚಿ ಮಸಾಜ್ ಮಾಡಿಕೊಳ್ಳುವುದು ಅತ್ಯಂತ ಪ್ರಯೋಜನಕಾರಿ. ನಮ್ಮ ಮುಪ್ಪು ದೂರವಾಗುವಂತೆ ಮಾಡುವ ಗುಣ ತುಪ್ಪಕ್ಕಿದೆ. ಹಾಗಾಗಿಯೇ ಆಯುರ್ವೆದವು ಅದಕ್ಕೆ ‘ನಿತ್ಯ ರಸಾಯನ’ ಎಂದು ಕರೆದು, ಆರೋಗ್ಯವಂತ ಮನುಷ್ಯ ಮತ್ತು ಹಲವು ರೋಗಗಳಿಂದ ಬಳಲುತ್ತಿರುವವರು ನಿತ್ಯವೂ ತುಪ್ಪ ಸೇವಿಸಬೇಕು ಎಂದಿದೆ. ಆದರೆ ಅದಕ್ಕೆ ಕೆಲವು ನಿಯಮಗಳು ಮತ್ತು ವಿಧಿಗಳಿವೆ.

    ಹೋಮದ ಬೆಂಕಿಗೆ ಚಮಚದಷ್ಟು ತುಪ್ಪ ಸುರಿದರೆ ಅದು ಚೆನ್ನಾಗಿ ಉರಿಯುತ್ತದೆ. ಆದರೆ ಒಂದು ಬಕೆಟ್ ತುಪ್ಪ ಸುರಿದರೆ ಇರುವ ಬೆಂಕಿಯೂ ಆರಿಹೋಗುತ್ತದೆ. ಅಂತೆಯೇ ನಾವು ತುಪ್ಪ ಸೇವಿಸುವಾಗ ನಮ್ಮ ಜೀರ್ಣಶಕ್ತಿಯ ಕಲ್ಪನೆಯಿರಬೇಕು. ತುಪ್ಪ ಸೇವನೆಯ ಪ್ರಮಾಣವನ್ನು ನಿತ್ಯ ಸ್ವಲ್ಪ ಸ್ವಲ್ಪವಾಗಿ ಹೆಚ್ಚಿಸುತ್ತ ಹೋಗಿ ದಿನಕ್ಕೆ ಐವತ್ತರಿಂದ ನೂರು ಮಿಲಿವರೆಗೂ ತುಪ್ಪ ಸೇವಿಸಬಹುದು. ಆದರೆ ತುಪ್ಪದಲ್ಲಿ ಪದೇಪದೆ ಕರಿದು ತಿನ್ನುವುದು ಸರಿಯಲ್ಲ. ಅನ್ನ, ರೊಟ್ಟಿ, ಪಲ್ಯ, ಉಂಡೆ, ಪಾಯಸ, ಹಾಲಿನ ಜೊತೆ ನೇರವಾಗಿ ಸೇವಿಸುವುದು ಒಳ್ಳೆಯದು. ಊಟದ ಪ್ರಾರಂಭದಲ್ಲೇ ತುಪ್ಪ ಸೇವಿಸಬೇಕು. ಅಜೀರ್ಣ, ವಾಂತಿ, ಭೇದಿ, ಜ್ವರ, ಪಿತ್ತಜನಕಾಂಗ ಅಥವಾ ಮೇದೋಜೀರಕ ಗ್ರಂಥಿಯ ಸಮಸ್ಯೆಗಳಿದ್ದಾಗ ತುಪ್ಪ ಸೇವಿಸುವ ಮೊದಲು ವೈದ್ಯರ ಸಲಹೆ ಅಗತ್ಯ. ಮುಖ್ಯವಾಗಿ ಮನೆಯಲ್ಲಿ ತಯಾರಿಸಿದ ತುಪ್ಪವನ್ನು ಬಳಸಬೇಕೇ ಹೊರತು ಅಂಗಡಿಯಿಂದ ತಂದಿದ್ದಲ್ಲ (ಯಾವುದೇ ಕಂಪನಿಯದ್ದಾದರೂ). ದೇಸಿ ಆಕಳ ಹಾಲಿನಿಂದ ತಯಾರಿಸಿದ ತುಪ್ಪ ಶ್ರೇಷ್ಠವಾದದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts