More

    ತರಬೇತಿ ಪಡೆದು ನಾಡಿನ ಸೇವೆಗೆ ಸನ್ನದ್ಧರಾಗಿ

    ನರೇಗಲ್ಲ: ನಿಮ್ಮಲ್ಲಿನ ನಾಯಕತ್ವದ ಗುಣ ಹೊರಹೊಮ್ಮಲು ನಾಯಕತ್ವದ ಶಿಬಿರಗಳು ಸಹಕಾರಿಯಾಗಿವೆ. ಇದರ ಪ್ರಯೋಜನ ಪಡೆದುಕೊಂಡು ಉತ್ತಮ ನಾಯಕರಾಗಿ ಹೊರಹೊಮ್ಮಿ ನಾಡಿನ ಸೇವೆಗೆ ಸನ್ನದ್ಧರಾಗಬೇಕೆಂದು ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಹೇಳಿದರು.

    ನರೇಗಲ್ಲದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ನಾಯಕತ್ವ ಶಿಬಿರದಲ್ಲಿ ಬುಧವಾರ ಸಂಜೆ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

    ರಾಷ್ಟ್ರೀಯ ಸೇವಾ ಯೋಜನೆಯ ಕಲ್ಪನೆಯೇ ಅದ್ಭುತವಾದುದು. ಇದರಿಂದ ನಿಮ್ಮಲ್ಲಿ ಶಿಸ್ತು ಮತ್ತು ಮಾನವೀಯ ಗುಣಗಳು ಮೂಡಲು ಸಹಾಯವಾಗುತ್ತದೆ. ಇಲ್ಲಿನ ಶಿಸ್ತನ್ನು ನೀವು ನಿಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡರೆ ನಿಮ್ಮ ಜೀವನ ಉನ್ನತ ಮಟ್ಟಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

    ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ಈಗಿನ ಜಾನಪದ ಹಾಡುಗಳು ಕೇಳಲು ಬಹಳಷ್ಟು ಅಸಹ್ಯಕರವಾಗಿವೆ. ಅವುಗಳನ್ನು ನೀವುಗಳು ರೂಢಿಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳಬೇಡಿರಿ. ನಿಜವಾದ ಜಾನಪದ ಹಾಡುಗಳನ್ನು ರೂಢಿಸಿಕೊಂಡರೆ ನಿಮಗೆ ಉತ್ತಮ ಸ್ಥಾನ ದೊರಕುತ್ತದೆ. ಜಾನಪದ ಹಾಡುಗಳು ಹೇಗಿರುತ್ತವೆ ಎಂಬುದನ್ನು ಅನೇಕ ಜಾನಪದ ಹಾಡುಗಳನ್ನು ಹಾಡಿ ತೋರಿಸುವುದರೊಂದಿಗೆ ಶಿಬಿರಾರ್ಥಿಗಳನ್ನು ರಂಜಿಸಿದರು.

    ನಿವೃತ್ತ ಮುಖ್ಯೋಪಾಧ್ಯಾಯ ಅರುಣ ಕುಲಕರ್ಣಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಸ್ಯ ನಿಂಗನಗೌಡ ಲಕ್ಕನಗೌಡ್ರ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಕಲ್ಲಯ್ಯ ಹಿರೇಮಠ, ಡಾ. ರತ್ನಾ ಪಾಟೀಲ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್. ಜಿ. ಕೇಶಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts