More

    ನ್ಯಾನೋ ಯೂರಿಯಾ ಗೊಬ್ಬರ ಬಳಸಿ ಅಧಿಕ ಲಾಭ ಹೊಂದಿ

    ಹಿರೇಕೆರೂರ: ರೈತರು ಕಡಿಮೆ ದರದಲ್ಲಿ ಅತ್ಯಂತ ಪರಿಣಾಮಕಾರಿಯಾದ ಇಫೋ› ಸಂಸ್ಥೆಯ ನ್ಯಾನೋ ಯೂರಿಯಾ, ಡಿಎಪಿ ಗೊಬ್ಬರವನ್ನು ಬಳಸಿ ಅಧಿಕ ಲಾಭ ಪಡೆಯಬಹುದಾಗಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಹೇಳಿದರು.


    ಪಟ್ಟಣದ ಟಿಎಪಿಎಂಎಸ್ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಇಫೋ› ಸಂಸ್ಥೆಯ ನ್ಯಾನೋ ಯೂರಿಯಾ, ಡಿಎಪಿ ಗೊಬ್ಬರದ ಉಪಯೋಗ ಕುರಿತು ಮಾಹಿತಿ ನೀಡುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


    ಈ ಗೊಬ್ಬರ ನುರಿತ ತಜ್ಞರು, ವಿಜ್ಞಾನಿಗಳ ಸಂಶೋಧನೆಯಿಂದ ತಯಾರಿಸಲ್ಪಟ್ಟಿದೆ. ಬೆಳೆಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಇಫೋ› ಕಂಪನಿಯವರು ಈ ಗೊಬ್ಬರ ಸಿಂಪಡಿಸಲು ಕಡಿಮೆ ದರದಲ್ಲಿ ಡ್ರೋಣ್​ಗಳನ್ನು ನೀಡುತ್ತಿದ್ದು, ರೈತರು ಇದರ ಬಗ್ಗೆ ಮಾಹಿತಿ ಅರಿತುಕೊಳ್ಳುವ ಮೂಲಕ ಬೆಳೆಗಳಿಗೆ ಯಾವುದೆ ಆತಂಕವಿಲ್ಲದೆ ಗೊಬ್ಬರ ಸಿಂಪಡಿಸಬಹುದಾಗಿದೆ ಎಂದರು.


    ಇಫೋ› ಸಂಸ್ಥೆಯ ಕ್ಷೇತ್ರಾಧಿಕಾರಿ ನಾಗರಾಜ ಕರಿಗಾರ, ನ್ಯಾನೋ ಗೊಬ್ಬರದ ಕುರಿತು ಸಮಗ್ರ ಮಾಹಿತಿ ನೀಡಿದರು.
    ಸಂಸ್ಥೆಯ ಕ್ಷೇತ್ರಾಧಿಕಾರಿ ಪ್ರಶಾಂತ ಪವಾರ, ಎಕೇಶಣ್ಣ ಬಣಕಾರ, ಎಸ್.ಬಿ. ತಿಪ್ಪಣ್ಣನವರ, ರವಿಶಂಕರ ಬಾಳಿಕಾಯಿ ಹಾಗೂ ಸಂಸ್ಥೆಯ ಸಿಬ್ಬಂದಿ, ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts