More

    ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ

    ಸಕಲೇಶಪುರ: ರೈತರ ಬೆಳೆಯುವ ಬೆಳೆಗೆ ಮೊದಲೇ ಬೆಲೆ ನಿಗದಿಯಾದಾಗ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

    ಪಟ್ಟಣದ ರೋಟರಿ ಭವನದಲ್ಲಿ ಕೃಷಿ ಕಸಮಾಜ, ಕೃಷಿ ಇಲಾಖೆ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ರೈತರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿರುವ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ರೈತರ ಬದುಕು ಅಲ್ಪ ಪ್ರಮಾಣದಲ್ಲಿ ಸುಧಾರಿಸುತ್ತಿದೆ. ಆದರೆ, ಇತರ ಉತ್ಪನ್ನಗಳಿಗೆ ಮೊದಲೇ ಧಾರಣೆ ನಮೂದಿಸಿರುವಂತೆ ಕೃಷಿ ಉತ್ಪನ್ನಗಳಿಗೂ ಮೊದಲೇ ದರ ಘೋಷಣೆಯಾದಾಗ ರೈತರು ನಷ್ಟ ಹೊಂದುವುದು ತಪ್ಪುವುದಲ್ಲದೆ ನಿಖರ ಆದಾಯ ಗಳಿಸಲು ಸಾಧ್ಯ ಎಂದರು.

    ಕೃಷಿಕ ಸಮಾಜದ ಅಧ್ಯಕ್ಷ ಹೆತ್ತೂರು ದೇವರಾಜ್ ಮಾತನಾಡಿ, ತಾಲೂಕಿನಲ್ಲಿ ಕೃಷಿಕರು ಅತ್ಯಂತ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು ಅತಿವೃಷ್ಟಿ, ಅನಾವೃಷ್ಟಿ, ಕಾಡುಪ್ರಾಣಿಗಳ ಹಾವಳಿ ಸಮಸ್ಯೆ ಅತಿಯಾಗಿ ಕಾಡುತ್ತಿರುವುದರಿಂದ ಸಾಕಷ್ಟು ಬೆಳೆಗಾರರು ಕೃಷಿಗೆ ಬೆನ್ನು ತೋರುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಸಂಗತಿ ಸರ್ಕಾರ ತಾಲೂಕಿನ ರೈತರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುವ ಮೂಲಕ ಕೃಷಿರಂಗವನ್ನು ಪ್ರೋತ್ಸಾಹಿಸಬೇಕು ಎಂದರು.

    ಸನ್ಮಾನ: ರಾಜ್ಯ ಹಾಗೂ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಉಚ್ಚಂಗಿ ಗ್ರಾಮದ ಪ್ರೇಮಕುಮಾರ್, ತಾಲೂಕು ಮಟ್ಟದ ಯುವ ರೈತ ಪ್ರಶಸ್ತಿಗೆ ಭಾಜನರಾಗಿರುವ ಈಚಲಪುರ ಗ್ರಾಮದ ರಘು ಹಾಗೂ ತಾಲೂಕು ಮಟ್ಟದ ಯುವ ರೈತ ಮಹಿಳೆ ಪ್ರಶಸ್ತಿ ಪಡೆದಿರುವ ಬೈಕೆರೆ ಗ್ರಾಮದ ಪ್ರತಿಭಾ ಅವರನ್ನು ಸನ್ಮಾನಿಸಲಾಯಿತು.

    ರೈತರಿಗೆ ಬ್ಯಾಂಕ್‌ಗಳಲ್ಲಿರುವ ಸೌಲಭ್ಯಗಳ ಬಗ್ಗೆ ಮೈಸೂರು ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಲತಾ ವಿವರಣೆ ನೀಡಿದರು. ತಾಂತ್ರಿಕ ವ್ಯವಸ್ಥಾಪಕಿ ಅನಿತಾ, ಕೃಷಿಕ ಸಮಾಜದ ಉಪಾಧ್ಯಕ್ಷ ಗಣೇಶ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts