More

    ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ

    ಲಕ್ಷ್ಮೇಶ್ವರ: ಕೆಲಸದಿಂದ ಕೈಬಿಟ್ಟ ತಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಪಟ್ಟಣದ ಪುರಸಭೆಯಲ್ಲಿ ಕಳೆದ ಅನೇಕ ವರ್ಷಗಳಿಂದ ದಿನಗೂಲಿ ಕಾರ್ವಿುಕರಾಗಿ ಸೇವೆ ಸಲ್ಲಿಸುತ್ತಿದ್ದ 12 ಜನ ಮಹಿಳಾ ಕಾರ್ವಿುಕರು ಪುರಸಭೆ ಅಧ್ಯಕ್ಷ ಪೂರ್ಣಿಮಾ ಪಾಟೀಲ ಹಾಗೂ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    2012ರಲ್ಲಿ ಹೊರಗುತ್ತಿಗೆ ಆಧಾರದಲ್ಲಿ 12 ಜನ ಪೌರಕಾರ್ವಿುಕರನ್ನು ಪಟ್ಟಣದಲ್ಲಿ ಮನೆಮನೆ ಕಸ ಸಂಗ್ರಹಣೆ ಕಾರ್ಯಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. 2018ರಲ್ಲಿ ಗುತ್ತಿಗೆ ಅವಧಿ ಮುಗಿದಿದೆ ಎಂದು ಕಾರಣ ಹೇಳಿ 12 ಮಹಿಳೆಯರನ್ನು ಕೆಲಸದಿಂದ ಕೈಬಿಡಲಾಗಿದೆ. ಆಗ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೇ ಖುದ್ದಾಗಿ ಆಗಮಿಸಿ ವಿಚಾರಣೆ ನಡೆಸಿ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಕಳೆದ ಎರಡು ವರ್ಷ ಪುರಸಭೆ ಆಡಳಿತ ಮಂಡಳಿಯೇ ಇರಲಿಲ್ಲ. ಕೆಲಸವಿಲ್ಲದೆ ಕಳೆದ 2 ವರ್ಷಗಳಿಂದ ನಮಗೆ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಕೂಡಲೆ, ನಮ್ಮನ್ನು ಮರು ನೇಮಕ ಮಾಡಿಕೊಂಡು ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

    ಸಮಸ್ಯೆ ಆಲಿಸಿದ ಪುರಸಭೆ ಅಧ್ಯಕ್ಷೆ ಮತ್ತು ಮುಖ್ಯಾಧಿಕಾರಿಗಳು ಈ ಬಗ್ಗೆ ಆಡಳಿತ ಮಂಡಳಿಯವರೆಲ್ಲರೂ ಸೇರಿ ರ್ಚಚಿಸಿ ತೀರ್ಮಾನ ಕೈಗೊಂಡು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

    ಈ ವೇಳೆ ಗಿರಿಜಮ್ಮ ನಂದೆಣ್ಣವರ, ಸಾವಕ್ಕ ಗಡದವರ, ಮಲ್ಲವ್ವ ಗಡದವರ, ಕರೆವ್ವ ದೊಡ್ಡಮನಿ, ದುರಗವ್ವ ಶಿರಹಟ್ಟಿ, ದ್ಯಾಮವ್ವ ನಂದೆಣ್ಣವರ, ಯಲ್ಲವ್ವ ಗಡದವರ, ಗಂಗವ್ವ ಅಯ್ಯಣ್ಣವರ, ಕಮಲವ್ವ ನಂದೆಣ್ಣವರ, ಹನಮವ್ವ ಮೇಗಲಮನಿ, ಪ್ರೇಮವ್ವ ಹಾದಿಮನಿ, ಹನುಮವ್ವ ಗಡದವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts