More

    ಮೈಮೇಲೆ ಬಟ್ಟೆ ಇಲ್ಲದಿದ್ರೂ ಪರವಾಗಿಲ್ಲ, ತಲೆಗೊಂದು ನೂಡಲ್​ ಕಟ್ಟಿಕೊಳ್ಳಿ ಎಂದಿದೆ ಹೋಟೆಲ್​ಗಳು!

    ಬರ್ಲಿನ್‌ (ಜರ್ಮನಿ): ವಿಶ್ವದೆಲ್ಲೆಡೆ ಈಗ ಸಾಮಾಜಿಕ ಅಂತರದ್ದೇ ಮಾತು. ಜನರು ಅದನ್ನು ಪಾಲನೆ ಮಾಡುತ್ತಿಲ್ಲ ಎಂಬ ತಲೆನೋವು ಭಾರತ ಮಾತ್ರವಲ್ಲದೇ ವಿದೇಶಿಗರನ್ನೂ ಬಿಟ್ಟಿಲ್ಲ.

    ಏನೆಲ್ಲಾ ಕಾಯ್ದೆ ಕಾನೂನು ಮಾಡಿದರೂ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ, ಇದರಿಂದ ಸೋಂಕು ಅತಿವೇಗದಲ್ಲಿ ಹರಡುತ್ತದೆ ಎಂಬ ಆತಂಕದಲ್ಲಿವೆ ಬಹುತೇಕ ಸರ್ಕಾರಗಳು. ಲಾಕ್​ಡೌನ್​ ಇರುವಾಗಲೇ ನಿಯಮ ಪಾಲಿಸದೇ ಇರುವವರು ಇನ್ನು ಲಾಕ್​ಡೌನ್​ ನಿಲ್ಲಿಸಿದರೆ ಪಾಲಿಸಿಯಾರೆ?

    ಇದನ್ನೂ ಓದಿ: VIDEO: ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ಆಗ ಅಮಾನತು ಶಿಕ್ಷೆ; ಈಗ ಕಟ್ಟಿ, ಥಳಿಸಿ, ಎಳೆದಾಡಿದ ಪೊಲೀಸರು- ವೀಡಿಯೋ ವೈರಲ್​

    ಇಂಥದ್ದೊಂದು ಹೊಸ ತಲೆನೋವು ಜರ್ಮನಿಯಲ್ಲಿ ಶುರುವಾಗಿದೆ. ಇಲ್ಲಿ ಲಾಕ್​ಡೌನ್​ ಸ್ಥಗಿತಗೊಳಿಸಿ ಕೆಲ ವಾರಗಳು ಕಳೆದಿವೆ. ಇದೀಗ ಜನರು ಹಿಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ನಿಯಮ ಉಲ್ಲಂಘನೆಗೆ ಮುಂದಾಗಿದ್ದಾರೆ. ಅದರಲ್ಲಿಯೂ ಅತ್ಯಧಿಕ ಕರೊನಾ ಸೋಂಕು ಕಾಣಿಸಿಕೊಂಡಿರುವ ಬರ್ಲಿನ್​ನಲ್ಲಿ ಲಾಕ್​ಡೌನ್​ ತೆರವುಗೊಳಿಸಿದ ದಿನದಿಂದ ನಿಯಮ ಉಲ್ಲಂಘನೆ ಹೆಚ್ಚಾಗುತ್ತಲೇ ಇದೆ.

    ಇಲ್ಲಿಯ ಜನರು ಲಾಕ್​ಡೌನ್​ ತೆರವುಗೊಂಡಿದ್ದೇ ತಡ, ಈಜುಕೊಳಗಳಿಗೆ ಧಾವಿಸುತ್ತಿದ್ದಾರೆ. ಹೋಟೆಲ್​ ಸೇರಿದಂತೆ ಎಲ್ಲೆಲ್ಲೆ ಈಜುಕೊಳಗಳು ಇವೆಯೋ ಅಲ್ಲೆಲ್ಲಾ ಜನಜಂಗುಳಿ ಜಾಸ್ತಿ ಇದೆ. ಇಲ್ಲಿ ಸಾಮಾಜಿಕ ಅಂತರ ಕಾಪಾಡದೇ ಇರುವುದು ಹೋಟೆಲ್​ ಮಾಲೀಕರಿಗೆ ದೊಡ್ಡ ತಲೆನೋವಾಗಿದೆ.

    ಇದನ್ನೂ ಓದಿ: ಅಮ್ಮನ ಬಳಿ ಹೋಗುವಂತಿಲ್ಲ, ಅಪ್ಪ ಯಾರು ಗೊತ್ತೇ ಇಲ್ಲ- ತಾಯಿಯ ಸ್ಪರ್ಶಕ್ಕೆ ಕಾದಿವೆ ಸಾವಿರಾರು ಕಂದಮ್ಮಗಳು…

    ಇದೇ ಕಾರಣಕ್ಕೆ ಇಲ್ಲಿಯ ಹೋಟೆಲ್​ ಮಾಲೀಕರು ಒಂದು ನಿಯಮ ಜಾರಿ ಮಾಡಿದ್ದಾರೆ. ಅದೇನೆಂದರೆ, ನೀವು ಬೇಕಿದ್ದರೆ ಈಜುವಾಗ ಬಟ್ಟೆ ಧರಿಸುವುದು ಬೇಡ, ಆದರೆ ಕಡ್ಡಾಯವಾಗಿ ಪೂಲ್​ ನೂಡಲ್​ (ಈಜುವಾದ ತಲೆಗೆ ಧರಿಸುವ ಸಾಧನ) ಮಾತ್ರ ಮರೆಯಬೇಡಿ. ಇಲ್ಲದಿದ್ದರೆ ಈಜುಕೊಳಕ್ಕೆ ಅನುಮತಿ ನೀಡುವುದಿಲ್ಲ ಎಂದಿದೆ!

    ಹೌದು. ಈ ಪೂಲ್​ ನೂಡಲ್​ ಅತಿ ಉದ್ದ ಇರುವ ಕಾರಣ, ಬೇಡ ಎಂದರೂ ಜನರು ದೂರ ದೂರು ಕುಳಿತುಕೊಳ್ಳುವಂತೆ ಮಾಡುತ್ತದೆ, ಇಲ್ಲದಿದ್ದರೆ ಅದು ಒಬ್ಬೊಬ್ಬರಿಗೆ ತಗಲುತ್ತದೆ. ಹೀಗಾಗಿ ಸಾಮಾಜಿಕ ಅಂತರ ಪಾಲಿಸುವುದು ಅನಿವಾರ್ಯವಾಗುತ್ತದೆ.

    ಇದನ್ನೂ ಓದಿ: ಚೀನಾದಲ್ಲಿ ಶುರುವಾಯ್ತು ಶಾಲೆ: ಮಕ್ಕಳ ತಲೆಗೆ ಬಂತು ಸಾಮಾಜಿಕ ಅಂತರ ಟೋಪಿ!

    ಪ್ರತಿ ಗಿರಾಕಿಗೆ ಬಣ್ಣ ಬಣ್ಣದ ಪೂಲ್‌ ನೂಡಲ್‌ ಜೋಡಿಸಿದ ಟೋಪಿಯನ್ನು ನಾವು ನೀಡುತ್ತಿದ್ದೇವೆ. ಪ್ರತಿ ಟೇಬಲ್‌ನ ಬಳಿಗೆ ಹೋಗಿ ಸಾಮಾಜಿಕ ಅಂತರ ಪಾಲನೆಯಾಗಿದೆಯೇ ಎಂದು ನೋಡುವುದು ಕಷ್ಟದ ಕೆಲಸ. ನಾವು ಹೋದರೆ ಗಿರಾಕಿಗಳಿಗೂ ಕಿರಿಕಿರಿಯಾಗುತ್ತದೆ. ಹೀಗಾಗಿ ಪೂಲ್‌ ನೂಡಲ್‌ ಬಳಲು ಆದೇಶಿಸಲಾಗಿದೆ.

    ಇದು ನೋಡಲು ತಮಾಷೆಯಾಗಿಯೂ ಇರುತ್ತದೆ ಎಂದಿದ್ದಾರೆ ಹೊಟೇಲಿನ ಮಾಲೀಕರಾದ ಜಾಕಲಿನ್‌ ರೋಥ್‌.‘
    ಚೀನಾ ಕೂಡ ಇಂಥದ್ದೇ ಟೋಪಿಯನ್ನು ಶಾಲೆಗಳಲ್ಲಿ ಮಕ್ಕಳಿಗೆ ಬಳಸಲು ಸೂಚಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts