More

    ರಿಲಯನ್ಸ್​ ರಿಟೇಲ್​​​​ನಲ್ಲಿ​​​​​ 3,675 ಕೋಟಿ ರೂ.ಹೂಡಿಕೆ ಮಾಡಿದ ಜನರಲ್​ ಅಟ್ಲಾಂಟಿಕ್​

    ಮುಂಬೈ: ಅಮೆರಿಕ ಮೂಲದ ಜಾಗತಿಕ ಹೂಡಿಕೆ ಸಂಸ್ಥೆ ಜನರಲ್​ ಅಟ್ಲಾಂಟಿಕ್​, ರಿಲಯನ್ಸ್​ ರಿಟೇಲ್​ ವೆಂಚರ್ಸ್​​ ಲಿಮಿಟೆಡ್​​ (ಆರ್​ಆರ್​ವಿಎಲ್​)ನಲ್ಲಿ 3,675 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಹಾಗೂ ರಿಲಯನ್ಸ್​ ರಿಟೇಲ್​ ವೆಂಚರ್ಸ್​ ಲಿಮಿಟೆಡ್​ ಇಂದು (ಬುಧವಾರ) ಘೋಷಣೆ ಮಾಡಿದೆ.

    ಆರ್​​​ಆರ್​ ವಿಎಲ್ ಪ್ರೀ- ಮನಿ ಈಕ್ವಿಟಿ ಮೌಲ್ಯ 4.285 ಲಕ್ಷ ಕೋಟಿ ರೂಪಾಯಿ ಇದ್ದು, ಜನರಲ್ ಅಟ್ಲಾಂಟಿಕ್ ಹೂಡಿಕೆ ಮಾಡುತ್ತಿರುವ ಮೊತ್ತಕ್ಕೆ ರಿಲಯನ್ಸ್ ರಿಟೇಲ್ ವೆಂಚರ್ಸ್​​ನಲ್ಲಿ ಶೇ. 0.84 ಪಾಲು ದೊರೆತಂತೆ ಆಗುತ್ತದೆ.
    ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಅಂಗಸಂಸ್ಥೆ ರಿಲಯನ್ಸ್​ ರಿಟೇಲ್​ ವೆಂಚರ್ಸ್​​ ಲಿಮಿಟೆಡ್​​ನಲ್ಲಿ ಜನರಲ್ ಅಟ್ಲಾಂಟಿಕ್​ ಹೂಡಿಕೆ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ವರ್ಷದ ಪ್ರಾರಂಭದಲ್ಲಿ 6,598.38 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತ್ತು. ಇದನ್ನೂ ಓದಿ: ಮೋಟಾರು ವಾಹನ ತೆರಿಗೆ ಇಳಿಕೆ: ಸಾರಿಗೆ ಸಂಘಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ

    ಆರ್​ಆರ್​ವಿಎಲ್​ ಎಂಬುದು ಭಾರತದ ಅತಿದೊಡ್ಡ, ವೇಗವಾಗಿ ಬೆಳೆಯುತ್ತಿರುವ, ಲಾಭದಾಯಕ ಉದ್ಯಮ. ದೇಶಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದ್ದು, 64 ಕೋಟಿ ಮಂದಿಗೆ ಸೇವೆ ಒದಗಿಸುತ್ತಿದೆ. ರೈತರು, ಎಂಎಸ್​ಎಂಇ ವಲಯ ಬಲ ಪಡಿಸುವ ಆಶಯದೊಂದಿಗೆ ಇದು ಸೇವೆ ಸಲ್ಲಿಸುತ್ತಿದೆ.

    ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಭಾರತದಲ್ಲಿ ಕಳೆದ 20 ವರ್ಷಗಳಿಂದ ಹೂಡಿಕೆ ಮಾಡಿ ಅನುಭವ ಇರುವ ಜನರಲ್ ಅಟ್ಲಾಂಟಿಕ್ ಜತೆಗೆ ನಮ್ಮ ಬಾಂಧವ್ಯ ವಿಸ್ತರಣೆ ಆಗುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ವರ್ತಕರು ಹಾಗೂ ಗ್ರಾಹಕರ ಸಬಲೀಕರಣಕ್ಕೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಅಂತಿಮವಾಗಿ ಭಾರತದ ರೀಟೇಲ್ ವಲಯದ ಬದಲಾವಣೆಗೆ ಪ್ರಯತ್ನಿಸುತ್ತೇವೆ ಎಂದಿದ್ದಾರೆ.

    ಬ್ಯಾಂಕ್​ ಪ್ರವೇಶಿಸಿದ 11ರ ಬಾಲಕ ಮಾಡಿದ್ದೇನು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts