More

    ಗೆಹ್ಲೋಟ್​ ಸರ್ಕಾರ ಉರುಳಿಸಲು ಮಾರ್ಚ್​ ಲಾಕ್​ಡೌನ್​ ಮುಂಚಿನಿಂದಲೂ ಪ್ರಯತ್ನ

    ನವದೆಹಲಿ: ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಲು ಮಾರ್ಚ್​ ಕೊನೆಯ ವಾರದಲ್ಲಿ ಜಾರಿಗೆ ಬಂದ ಲಾಕ್​ಡೌನ್​ಗಿಂತ ಮೊದಲಿನಿಂದಲೂ ಪ್ರಯತ್ನಗಳು ನಡೆದಿದ್ದವು ಎಂದು ಹೇಳಲಾಗುತ್ತಿದೆ.

    ಬಿಜೆಪಿಯ ಹೈಕಮಾಂಡ್​ ಅದಾಗಲೇ ಸಿಎಂ ಹುದ್ದೆ ಕೈತಪ್ಪಿದಾಗಿನಿಂದಲೂ ಅತೃಪ್ತರಾಗಿದ್ದ ಡಿಸಿಎಂ ಸಚಿನ್​ ಪೈಲಟ್​ ಜತೆ ಮಾತುಕತೆ ನಡೆಸುತ್ತಿತ್ತು ಎನ್ನಲಾಗಿದೆ. ಆ ಪ್ರಯತ್ನ ಈಗ ತುರುಸುಗೊಂಡಿರುವುದಾಗಿ ಎಂದು ಹೇಳಲಾಗುತ್ತಿದೆ.

    ಗೆಹ್ಲೋಟ್​ ಸರ್ಕಾರ ಉರುಳಿಸಿದರೆ ಸಿಎಂ ಪಟ್ಟ ತಮಗೇ ಕೊಡಬೇಕು ಎಂದು ಸಚಿನ್​ ಪೈಲಟ್​ ಬಿಜೆಪಿ ಮುಖಂಡರಿಗೆ ಷರತ್ತು ಹಾಕಿದ್ದಾರೆ. ಆದರೆ, ಅಲ್ಲಿ 45 ಶಾಸಕರ ಬೆಂಬಲ ಹೊಂದಿರುವ ವಸುಂಧರಾ ರಾಜೆ ಅವರನ್ನು ಸಿಎಂ ಮಾಡಬೇಕು ಎಂಬುದು ಬಿಜೆಪಿ ಹೈಕಮಾಂಡ್​ನ ಇಚ್ಛೆಯಾಗಿದೆ. ಈ ವಿಷಯ ತಿಳಿದಿದ್ದರೂ ಗೆಹ್ಲೋಟ್​ ವಿರುದ್ಧ ಪೈಲಟ್​ ಅವರ ಬಂಡಾಯ ಮುಂದುವರಿದಿದೆ.

    ಇದನ್ನೂ ಓದಿ: ಕ್ವಾರಂಟೈನ್‌ನಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಕೈಹಿಡಿದ ‘ಯಯಾತಿ’

    ಸದ್ಯಕ್ಕೆ ಪೈಲಟ್​ ಕಾಂಗ್ರೆಸ್​ ಹೈಕಮಾಂಡ್​ ಮುಂದೆ ಬಲಪ್ರದರ್ಶನ ಮಾಡುವ ಮೂಲಕ ಸಿಎಂ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿಟ್ಟಿದ್ದಾರೆ. ಇದಕ್ಕಾಗಿ ಅವರು ತಮ್ಮ ಬೆಂಬಲಿಗ 23 ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯಕ್ಕೆ ಬಿಜೆಪಿ ಹೈಕಮಾಂಡ್​ ಜತೆ ಅವರ ಭೇಟಿ ನಿಗದಿಯಾಗಿಲ್ಲ ಎನ್ನಲಾಗುತ್ತಿದೆ.

    ಪ್ರಾದೇಶಿಕ ಪಕ್ಷ: ಕಾಂಗ್ರೆಸ್​ ಹೈಕಮಾಂಡ್​ ತಮ್ಮ ಬೆಂಬಲಕ್ಕೆ ನಿಲ್ಲದೇ ಹೋದರೆ ಪಕ್ಷದಿಂದ ಹೊರಬಂದು ಪ್ರಾದೇಶಿಕ ಪಕ್ಷ ರಚಿಸಿಕೊಳ್ಳುವ ಬಗ್ಗೆಯೂ ಪೈಲಟ್​ ಚಿಂತನೆ ನಡೆಸಿದ್ದಾರೆ. ಇದಕ್ಕೆ ಅವಕಾಶವಾದರೆ ಬಿಜೆಪಿಯೊಂದಿಗೆ ಸಖ್ಯ ಬೆಳಸದಿರಲೂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಕಾಲೇಜಿನಲ್ಲಿ ಮಹಿಳೆಯರಿಗೆ ಪದವಿ ಜತೆಗೆ ಪಾಸ್​ಪೋರ್ಟ್​ ಕೂಡ ಕೊಡ್ತಾರೆ…! ಎಲ್ಲಿ? ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts