More

    ವ್ಯಕ್ತಿತ್ವ ವಿಕಾಸನಕ್ಕೆ ಬದ್ಧತೆ ಅಗತ್ಯ

    ಹೂವಿನಹಡಗಲಿ: ವಚನಗಳ ಅಧ್ಯಯನ ಮನುಷ್ಯನ ಸಂಕುಚಿತ ಮನೋಭಾವ ಬದಲಾಯಿಸುವಲ್ಲಿ ಮುಖ್ಯಪಾತ್ರ ವಹಿಸುತ್ತವೆ ಎಂದು ಹರಪನಹಳ್ಳಿಯ ಎಡಿಬಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎ.ಎಂ.ರಾಜಶೇಖರಯ್ಯ ಹೇಳಿದರು.

    ವಚನಗಳಿಂದ ಸಂಕುಚಿತ ಮನೋಭಾವ ಬದಲಾವಣೆ

    ಪಟ್ಟಣದ ಜಿಬಿಆರ್ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023 ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ವ್ಯಕ್ತಿ ವಿಕಸನ ವಿಷಯದ ಕುರಿತಾದ ಉಪನ್ಯಾಸದಲ್ಲಿ ಮಾತನಾಡಿದರು.

    ಇದನ್ನೂ ಓದಿ:

    ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಹೊಂದಲು ಮೊದಲು ಬದ್ಧತೆ ಇರಬೇಕು. ಬಸವಣ್ಣ ಹೇಳಿದ ಏಳು ಸೂತ್ರಗಳನ್ನು ಅಳವಡಿಸಿಕೊಂಡಾಗ ಬದುಕು ಸುಂದರವಾಗಿರಲಿದೆ. ಡಾಂಬಿಕ ಭಕ್ತಿಯಿಂದ ಮೊದಲು ಮನುಷ್ಯರು ದೂರವಿರಬೇಕು. ಇವತ್ತಿನ ಸ್ವಾಮೀಜಿಗಳು ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ವಚನಗಳು ಜಾತ್ಯಾತೀತ ನಿಲುವನ್ನು ಒಳಗೊಂಡಿವೆ. ಆಸೆಯನ್ನು ತಿರಸ್ಕರಿಸಲು ಮನುಷ್ಯನಿಂದ ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ರಚನೆಯಾದ ವಚನಗಳು 21ನೇ ಶತಮಾನದಲ್ಲಿಯೂ ಸಹ ಸತ್ಯವಾಗುತ್ತಿವೆ. ಆಸೆಗಳಿಂದ ಮನುಷ್ಯನ ಬೌದ್ಧಿಕ ವಿಕಸನ ಕುಂಠಿತಗೊಳ್ಳುತ್ತದೆ ಎಂದರು.

    ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಚಂದ್ರಬಾಬು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಜ್ಞಾನವನ್ನು ಕಟ್ಟುವಂತವರಾಗಬೇಕು. 12 ಶತಮಾನದಲ್ಲಿ ಅನೇಕ ಜನ ವಚನಕಾರರು ವೈಜ್ಞಾನಿಕ ಚಿಂತನೆ ಮಾಡಿದ್ದಾರೆ. ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ವಚನಕಾರರ ಪ್ರೇರಣೆಯಿಂದಲೇ ನಮ್ಮಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತಿದೆ. ಮೂಢನಂಬಿಕೆ ತೊಲಗಿಸಿ ಸಾಂಪ್ರದಾಯಿಕ ಶಿಕ್ಷಣ ಪ್ರಾರಂಭವಾಗಲು ವಚನ ಚಳವಳಿ ಕಾರಣವಾಗಿದೆ ಎಂದು ಹೇಳಿದರು.

    ಪ್ರಾಚಾರ್ಯ ಎಸ್.ಎಸ್.ಪಾಟೀಲ, ವಾಣಿಜ್ಯ ವಿಭಾಗದ ಮುಖ್ಯಸ್ಥ ಬಿ.ಮಲ್ಲಿಕಾರ್ಜುನ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಸದಾಶಿವಾ, ದೈಹಿಕ ಶಿಕ್ಷಣ ನಿರ್ದೇಶಕ ಬಡೇಸಾಬ ನಾಯಕ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶರಣಪ್ಪ ಜಕ್ಕಲಿ ಉಪನ್ಯಾಸಕರಾದ ಮಧುಸೂದನ ಕೆ, ಮಾಬುಸಾಬ್, ಜಾವಿದ್ ಭಾಷಾ, ಬಸವರಾಜ ಪೂಜಾರ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts