More

    ಚಿಕ್ಕೋಡಿ, ಬಾಗಲಕೋಟೆ ಬಾಲಕಿಯರಿಗೆ ಜಯದ ಮಾಲೆ

    ಬ್ಯಾಡಗಿ: ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಜರುಗಿದ ಬೆಳಗಾವಿ ವಿಭಾಗ ಮಟ್ಟದ 14-17 ವಯೋಮಾನದ ಕಬಡ್ಡಿ ಪಂದ್ಯಾವಳಿಗೆ ಬುಧವಾರ ತೆರೆ ಬಿದ್ದಿತು.

    ಮೂರು ದಿನಗಳ ಕಾಲ 9 ಜಿಲ್ಲೆಗಳಿಂದ 36 ತಂಡಗಳು ಕಬಡ್ಡಿ ತಂಡಗಳು ಆಟದಲ್ಲಿ ಪಾಲ್ಗೊಂಡು ರೋಮಾಂಚನಕಾರಿ ಪ್ರದರ್ಶನ ನೀಡಿದವು. ಕ್ವಾರ್ಟರ್ ಪೈನಲ್ ಹಾಗೂ ಸೆಮಿಫೈನಲ್‌ವರೆಗೂ ತೀವ್ರ ಸೆಣಸಾಟ ನಡೆಸಿದ್ದವು. ಬುಧವಾರ ರಾತ್ರಿ 12 ಗಂಟೆಗೆ ಫೈನಲ್ ಪಂದ್ಯಗಳು ಪೂರ್ಣಗೊಂಡವು.

    ಪ್ರೌಢಶಾಲೆ (17ವರ್ಷ) ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿ-ಧಾರವಾಡ ತಂಡ ಫೈನಲ್‌ನಲ್ಲಿ ಮುಖಾಮುಖಿಯಾದವು. ಅಂತಿಮವಾಗಿ ಚಿಕ್ಕೋಡಿ ಗೆಲುವಿನ ನಗೆ ಬೀರಿತು. ಬಾಲಕರ ವಿಭಾಗದಲ್ಲಿ ಬಾಗಲಕೋಟೆ-ಶಿರಸಿ ತಂಡಗಳ ಮಧ್ಯದ ಪೈಪೋಟಿಯಲ್ಲಿ ಬಾಗಲಕೋಟೆ ವಿಜಯಮಾಲೆ ಧರಿಸಿತು.

    ಪ್ರಾಥಮಿಕ (14ವರ್ಷ) ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆ-ಗದಗ ಜಿಲ್ಲೆ ತಂಡದ ಅಂತಿಮ ಪಂದ್ಯದಲ್ಲಿ ಬಾಗಲಕೋಟೆ ಗೆಲುವು ಪಡೆಯಿತು. ಬಾಲಕರ ವಿಭಾಗದಲ್ಲಿ ಕಾರವಾರ-ಬೆಳಗಾವಿ ಜಿಲ್ಲೆ ತಂಡದ ನಡುವೆ ಜರುಗಿದ ಫೈನಲ್ ಪಂದ್ಯದಲ್ಲಿ ಕಾರವಾರ ತಂಡ ಜಯ ಸಾಧಿಸಿತು.

    ಪ್ರಥಮ ಸ್ಥಾನ ಪಡೆದ ನಾಲ್ಕು ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಬಸವರಾಜ ಶಿವಣ್ಣನವರ, ಗಂಗಣ್ಣ ಎಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟೆ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ದಾನಪ್ಪ ಚೂರಿ, ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಶಿವಾನಂದ ಮಲ್ಲನಗೌಡ್ರ, ಡಿ.ಬಿ. ಬುಡ್ಡನಗೌಡ್ರ, ಗಿರೀಶ ಇಂಡಿಮಠ, ಭಾಷಾಸಾಬ ದೊಡ್ಡಮನಿ, ಜಮೀರ ರಿತ್ತಿ, ಜೀವರಾಜ ಛತ್ರದ, ಎ.ಟಿ. ಪೀಠದ, ಎಂ.ಎಫ್. ಕರಿಯಣ್ಣನವರ, ಚಂದ್ರು ಸಣ್ಣಗೌಡ್ರ, ಮಲ್ಲಪ್ಪ ಕರೆಣ್ಣನವರ, ತರಬೇತುದಾರ ಮಂಜುಳಾ ಭಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts