More

    ಡೋಬಿಹಳ್ಳಕ್ಕೆ ಸೇರುತ್ತಿದೆ ಕಸದ ರಾಶಿ

    ಬಾಳೆಹೊನ್ನೂರು: ಬಿ.ಕಣಬೂರು ಗ್ರಾಮ ಪಂಚಾಯಿತಿ ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ಕೆಲವರು ನಿತ್ಯವೂ ತ್ಯಾಜ್ಯ ಎಸೆಯುತ್ತಿದ್ದಾರೆ. ಇದರಿಂದ ಹಳ್ಳದ ನೀರು ಮಲಿನವಾಗುತ್ತಿದೆ.

    ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ತಡೆಗೋಡೆ ನಿರ್ಮಿಸಿದ್ದರೂ ಅದೇ ಜಾಗದಲ್ಲಿ ಕೆಲ ಸಾರ್ವಜನಿಕರು ಪ್ರತಿ ದಿನ ಕಸ ಹಾಕುತ್ತಿದ್ದಾರೆ. ಹಳ್ಳದ ನೀರು ಹರಿದು ಭದ್ರಾ ನದಿಯನ್ನು ಸೇರುತ್ತದೆ. ನೀರಿನೊಂದಿಗೆ ಕಸವೂ ನದಿಗೆ ಸೇರುತ್ತಿರುವುದರಿಂದ ನದಿಯ ಒಡಲು ಕಲುಷಿತಗೊಳ್ಳುತ್ತಿದೆ. ಕೆಲ ಸಾರ್ವಜನಿಕರು ಕಸ ಹಾಕದಂತೆ ಎಚ್ಚರಿಸಿದರೂ ಯಾವುದೇ ರೀತಿ ಸ್ಪಂದಿಸದೆ ಮತ್ತದೇ ಚಾಳಿ ಮುಂದುವರಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
    ಬಿ.ಕಣಬೂರು ಗ್ರಾಪಂನಿಂದ ವಾರಕ್ಕೆ ಎರಡು ದಿನ ಕಸದ ಟ್ರ್ಯಾಕ್ಟರ್ ಅನ್ನು ಎಲ್ಲ ವಾರ್ಡ್‌ಗಳಿಗೆ ಕಳುಹಿಸುತ್ತಿದ್ದರೂ ಕೆಲವರು ಕಸವನ್ನು ವಾಹನಕ್ಕೆ ನೀಡದೆ ಅಲ್ಲಲ್ಲಿ ಎಸೆಯುತ್ತಿದ್ದಾರೆ. ಕೆಲವೆಡೆ ಕಸದ ತೊಟ್ಟಿಗಳನ್ನು ಇಟ್ಟಿದ್ದರೂ ಅಲ್ಲಿಗೂ ಕಸ ಹಾಕುತ್ತಿಲ್ಲ. ಇದರಿಂದಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಗ್ರಾಪಂನವರು ಕಟ್ಟುನಿಟ್ಟಾಗಿ ಮನೆಗಳ ಮಾಲೀಕರಿಗೆ ಸೂಚನೆ ನೀಡಿ ಕಸವನ್ನು ವಾಹನಕ್ಕೆ ನೀಡುವಂತೆ ತಾಕೀತು ಮಾಡಬೇಕು ಎನ್ನುತ್ತಾರೆ ಸ್ಥಳೀಯರು.
    ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ಕಸ ಎಸೆದಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು. ಗ್ರಾಮಕ್ಕೆ ಕಸದ ವಾಹನ ತೆರಳುತ್ತಿದೆ. ಕಸವನ್ನು ಯಾರು ವಾಹನಕ್ಕೆ ನೀಡುತ್ತಿಲ್ಲ ಎಂಬುದನ್ನು ಪರಿಶೀಲಿಸಲಾಗುವುದು. ಕಸ ಎಸೆದು ಪರಿಸರ ಮಾಲಿನ್ಯ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಬಿ.ಕಣಬೂರು ಪಿಡಿಒ ಕಾಶಪ್ಪ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts