More

    ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!

    ಗಾಂಧಿನಗರ: ದೇಶಾದ್ಯಂತ ಕರೊನಾ ಹಾವಳಿ ಕೈಮೀರಿ ಹೋಗಿದ್ದು, ಸೋಂಕಿನ ಪ್ರಕರಣಗಳಷ್ಟೇ ಅಲ್ಲದೆ ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಸಮಯದಲ್ಲಿ ಬೆಡ್​-ಆಕ್ಸಿಜನ್​ ಸಿಗದಿರುವುದು ಒಂದೆಡೆಯಾದರೆ, ಇನ್ನು ಕರೊನಾದಿಂದಾಗಿ ಸತ್ತವರ ದೇಹಗಳನ್ನು ಸುಡಲೂ ಜಾಗವಿಲ್ಲದಂತಾಗಿದೆ.

    ಹೀಗೆ ಶವಸಂಸ್ಕಾರಕ್ಕೆ ಜಾಗದ ಕೊರತೆಯಿಂದಾಗಿ ಇಲ್ಲೊಂದು ಕಡೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ ಮಾಡುವಂತಾಗಿದೆ. ಕಸ ಹಾಕುವ ಜಾಗದಲ್ಲೇ ಚಿತೆಗಳನ್ನು ಹಾಕಿ ಶವಸಂಸ್ಕಾರ ನಡೆಸಲಾಗುತ್ತಿದೆ. ಗುಜರಾತ್​ನ ಗಾಂಧಿನಗರದ ನಗರ ಪಾಲಿಕೆಗೆ ಸೇರಿರುವ, ಸಬರಮತಿ ನದಿ ಪಕ್ಕದ ಸೆಕ್ಟರ್​ 39ರಲ್ಲಿನ ಮಸಣದ ಪಕ್ಕದ ತಿಪ್ಪೆಗುಂಡಿಯಲ್ಲೂ ಶವಸಂಸ್ಕಾರ ನಡೆಸಲಾಗುತ್ತಿದೆ.

    ಸಿಎನ್​ಜಿ ಮೂಲಕ ಕಾರ್ಯನಿರ್ವಹಿಸುವ ಇಲ್ಲಿನ ಚಿತಾಗಾರಗಳು ಕೆಲವು ದಿನಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ 11 ಕಟ್ಟಿಗೆ ಚಿತಾಗಾರಗಳ ಮೂಲಕ ಶವಸಂಸ್ಕಾರ ನಡೆಸಲಾಗುತ್ತಿದೆ. ಅದಾಗ್ಯೂ ಬುಧವಾರ 8 ಶವಗಳಿಗೆ ಸಮಯಕ್ಕೆ ಸರಿಯಾಗಿ ಸಂಸ್ಕಾರ ನಡೆಸಲು ಅವಕಾಶ ಸಿಕ್ಕಿಲ್ಲ. ಇಲ್ಲಿ ದಿನವೊಂದಕ್ಕೆ 75-80 ಶವಗಳು ಬರುತ್ತಿದ್ದು, ಆ ಪೈಕಿ ಶೇ. 25 ಕರೊನೇತರ ಸಾವಿಗೆ ಒಳಗಾದಂಥವು. ಸಿಎನ್​ಜಿ ಚಿತಾಗಾರ ಕೆಟ್ಟು ಸ್ಥಗಿತಗೊಂಡಿರುವುದು ಹಾಗೂ ಹತ್ತಿರದ ಸರ್ಗಾಸನ್​ ಸ್ಮಶಾನದಲ್ಲಿ ಕೋವಿಡ್​ ಸೋಂಕಿತ ಶವಗಳ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪಕ್ಕದ ತಿಪ್ಪೆಗುಂಡಿಯಲ್ಲಿ ಶವಸಂಸ್ಕಾರ ನಡೆಸುವ ಪರಿಸ್ಥಿತಿ ಸೃಷ್ಟಿ ಆಗಿದೆ. ಒಟ್ಟಿನಲ್ಲಿ ಕರೊನಾ ಎರಡನೇ ಅಲೆ ಗಂಭೀರವಾಗಿದ್ದು, ಆತಂಕವನ್ನು ಹೆಚ್ಚಿಸಲಾರಂಭಿಸಿದೆ. (ಏಜೆನ್ಸೀಸ್)

    ರಾಜ್ಯದಲ್ಲಿ ಕರೊನಾ ಕಂಟ್ರೋಲ್ ತಪ್ಪಿದೆ, ಕೈಮುಗಿಯುವೆ ಮನೆಯಿಂದ ಯಾರೂ ಹೊರ ಬರಬೇಡಿ: ಯಡಿಯೂರಪ್ಪ

    ಚಿತಾಗಾರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪೊಲೀಸ್​! ಇದು ಕರೊನಾದ ಕರಾಳ ದೃಶ್ಯ

    ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಬಲಿ! ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸೊಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts