More

    ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಾಲಾಯಿಸಿದ ಪುಂಡರಿಗೆ ಸಾರ್ವಜನಿಕರಿಂದ ಧರ್ಮದೇಟು: ತನಿಖೆ ವೇಳೆ ಬಯಲಾಯ್ತು ಅಸಲಿಯತ್ತು

    ಶಿವಮೊಗ್ಗ: ಗಾಂಜಾ ಮತ್ತಿನಲ್ಲಿದ್ದ ಯುವಕರ ತಂಡವೊಂದು ಕದ್ದ ಕಾರಿನಲ್ಲಿ ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ ಪಾದಚಾರಿ ಮತ್ತು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದಲ್ಲದೆ, ಚಾಕು ತೋರಿಸಿ ಬೆದರಿಸಿದ್ದ ಮೂವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.

    ಗೋಪಾಳದ ಮೂವರನ್ನು ಬಂಧಿಸಿದ್ದು, ಟಿಪ್ಪುನಗರದ ಯುವಕ ನಾಪತ್ತೆಯಾಗಿದ್ದಾನೆ. ಬುಧವಾರ ಬೆಳ್ಳಂಬೆಳಗ್ಗೆ ಗಣಪತಿ ದೇವಸ್ಥಾನದ ಬಳಿ ಪಾದಚಾರಿಯೊಬ್ಬರಿಗೆ ಮತ್ತು ಪೊಲೀಸ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಸಾರ್ವಜನಿಕರು ಗುಂಪು ಸೇರಿಸುತ್ತಿದ್ದಂತೆ ಚಾಕು, ಮಚ್ಚುಗಳಿಂದ ಬೆದರಿಸಿ ಕಾರನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದರು.

    ಗಾಂಧಿನಗರದ 2ನೇ ತಿರುವಿನ ಮನೆಯೊಂದರಲ್ಲಿ ಅವಿತುಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿದ್ದ ಸಾರ್ವಜನಿಕರು ಮೂವರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಒಬ್ಬ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಗ್ಗೆ ಮಾಹಿತಿ ನೀಡಿದರೂ ತಡವಾಗಿ ಸ್ಥಳಕ್ಕೆ ಬಂದ ಪೊಲೀಸರ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಮೂವರನ್ನು ವಶಕ್ಕೆ ಪಡೆದ ಪೊಲೀಸರು ಜಯನಗರ ಠಾಣೆಗೆ ಕರೆದೊಯ್ದು ತನಿಖೆ ಮುಂದುವರಿಸಿದರು. ಕಾರನ್ನು ಜಪ್ತಿ ಮಾಡಿದ್ದು ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಜಯನಗರ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‘

    ಬೆಳಕಿಗೆ ಬಂದ ಕಾರು ಕಳ್ಳತನ:

    ವಿಚಿತ್ರವೆಂದರೆ ಯುವಕರು ಗೋಪಾಳದ ತುಂಗಾನಗರ ಏರಿಯಾದಲ್ಲಿ ಮಂಗಳವಾರ ರಾತ್ರಿ ಮಾರುತಿ-800 ಕಾರನ್ನು ಕಳವು ಮಾಡಿದ್ದರು. ಗಾಂಜಾ ಮತ್ತಿನಲ್ಲಿ ಊರೆಲ್ಲ ಸುತ್ತಾಡಿದ್ದಾರೆ ಎನ್ನಲಾಗಿದೆ. ಕಾರು ಕಳವು ಆಗಿರುವ ಬಗ್ಗೆ ಮಾಲೀಕರು ಮಂಗಳವಾರ ರಾತ್ರಿಯೇ ತುಂಗಾನಗರ ಠಾಣೆಗೆ ತೆರೆಳಿ ದೂರು ನೀಡಿದ್ದರು. ಅದೇ ಕಾರು ರವೀಂದ್ರನಗರದ ಮುಖ್ಯ ರಸ್ತೆಯಲ್ಲಿ ಪತ್ತೆಯಾಗಿದೆ.

    ಹೂವಿನ ಹಾರ ಹಾಕಿಕೊಂಡೆ ನೇಣಿಗೆ ಶರಣಾದ ಕೆಎಸ್ಆರ್ಟಿಸಿ ಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts