More

    ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ; ಆರ್ಥಿಕ ಹೊರೆ ಕಾರಣ; ಮೈಸೂರು ಸಂಗೀತ ವಿವಿ ತೆಕ್ಕೆಗೆ ಗಂಗೂಬಾಯಿ ಟ್ರಸ್ಟ್

    ಮಂಜುನಾಥ ಎಸ್. ಅಂಗಡಿ ಧಾರವಾಡ

    ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಅನ್ನು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆಡಳಿತ ಕಾರ್ಯವ್ಯಾಪ್ತಿಗೆ ಹಸ್ತಾಂತರಿಸುವAತೆ ಸರ್ಕಾರ ಇತ್ತೀಚೆಗೆ ಆದೇಶಿಸಿದೆ.
    ಉನ್ನತ ಶಿಕ್ಷಣ ಇಲಾಖೆಯು ಫೆಬ್ರವರಿ ೨೮ರಂದು ಆದೇಶ ಹೊರಡಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿದ್ದ ಟ್ರಸ್ಟ್ನ ನಿರ್ವಹಣೆಯನ್ನು ದಕ್ಷಿಣ ಕರ್ನಾಟಕದ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ.
    ಟ್ರಸ್ಟ್ ನಡೆಸುತ್ತಿದ್ದ ಹಿಂದೂಸ್ಥಾನಿ ಸಂಗೀತ ಕೇಂದ್ರದಲ್ಲಿ ಪ್ರಸ್ತುತ ೨೧ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಆದರೂ ಸಂಸ್ಥೆಯ ನಿರ್ವಹಣೆಗೆ ವಾರ್ಷಿಕ ಸುಮಾರು ೨೧೩.೫೪ ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಎಂಬ ಕಾರಣ ನೀಡಲಾಗಿದೆ. ಹಸ್ತಾಂತರ ಪ್ರಕ್ರಿಯೆಗೆ ಸಂಬAಽಸಿ ಕೆಲ ಷರತ್ತುಗಳನ್ನು ವಿಽಸಲಾಗಿದೆ.

    • ಷರತ್ತುಗಳು ಅನ್ವಯ:
      ಟ್ರಸ್ಟ್ ತನ್ನ ಎಲ್ಲ ಆಡಳಿತಾತ್ಮಕ, ಶೈಕ್ಷಣಿಕ ಕಾರ್ಯಚಟುವಟಿಕೆ ಮತ್ತು ಹಣಕಾಸು ನಿರ್ವಹಣೆ ಕಾರ್ಯಚಟುವಟಿಕೆಗಳನ್ನು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಯವರ ವಿವೇಚಣಾಽಕಾರದೊಂದಿಗೆ ನಿರ್ವಹಿಸಬೇಕು. ತಾತ್ಕಾಲಿಕ, ಹೊರಗುತ್ತಿಗೆ, ಕಾಯಂ ಹುದ್ದೆಗಳ ನೇಮಕಾತಿಗೆ ಸಂಗೀತ ವಿಶ್ವವಿದ್ಯಾಲಯದ ಮೂಲಕ ಪ್ರಸ್ತಾವ ಸಲ್ಲಿಸಬೇಕು. ಟ್ರಸ್ಟ್ಗೆ ಮಂಜೂರಾಗಿರುವ ಹುದ್ದೆಗಳನ್ನು ಮಾತ್ರ ಮುಂದುವರಿಸಬೇಕು. ಹೆಚ್ಚುವರಿ ಹುದ್ದೆ, ಸಿಬ್ಬಂದಿಯನ್ನು ಅವಶ್ಯವಿದ್ದರೆ ಮುಂದುವರಿಸಬೇಕು. ಇಲ್ಲವಾದರೆ ಕೂಡಲೇ ಬಿಡುಗಡೆಗೊಳಿಸಬೇಕು. ಸಂಸ್ಥೆಯ ಚರ ಮತ್ತು ಸ್ಥಿರ ಆಸ್ತಿಯನ್ನು ವರ್ಗಾವಣೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ವಾರ್ಷಿಕ ಅನುದಾನದ ಕೋರಿಕೆಯನ್ನು ಕುಲಸಚಿವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಅಽನಿಯಮ ೨೦೦೯ರ ಅಡಿ ನಿರ್ವಹಿಸಬೇಕು. ಸಂಸ್ಥೆ ಆರಂಭವಾದಾಗಿನಿAದ ಈವರೆಗೆ ನೀಡಲಾದ ಅನುದಾನದ ವೆಚ್ಚವನ್ನು ಕುಲಸಚಿವರಿಗೆ ಸಲ್ಲಿಸಬೇಕು. ಸಂಸ್ಥೆಯು ಹಿಂದೂಸ್ಥಾನಿ ಸಂಗೀತ ಕೇಂದ್ರವನ್ನು ಮಾತ್ರ ನಡೆಸಲು ಉದ್ದೇಶಿಸಿ ಸ್ಥಾಪನೆಯಾಗಿದ್ದರೆ ಹಾಗೂ ಸಂಸ್ಥೆಯಿAದ ಬೇರಾವುದೇ ಚಟುವಟಿಕೆಗಳು ಚಾಲನೆಯಲ್ಲಿಲ್ಲದಿದ್ದರೆ ಜಿಲ್ಲಾಽಕಾರಿ ಟ್ರಸ್ಟ್ ಅನ್ನು ನಿರಶನಗೊಳಿಸಬೇಕು. ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಷರತ್ತು ವಿಽಸಲಾಗಿದೆ.
    • ಪ್ರತ್ಯೇಕತೆ ಬೇಡ: ಸಂಗೀತದ ಎಲ್ಲ ಪ್ರಾಕಾರಗಳು ಮತ್ತು ಪ್ರದರ್ಶಕ ಕಲೆಗಳ ಪ್ರೋತ್ಸಾಹಕ್ಕೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿದೆ. ಆದ್ದರಿಂದ ಟ್ರಸ್ಟ್ ಮೂಲಕ ಹಿಂದೂಸ್ಥಾನಿ ಸಂಗೀತ ಕೇಂದ್ರವನ್ನು ಪ್ರತ್ಯೇಕವಾಗಿ ಮುಂದುವರಿಸುವ ಅಗತ್ಯವಿಲ್ಲ ಎಂದು ಸರ್ಕಾರ ಮನಗಂಡಿದೆ. ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆ, ಚರ- ಸ್ಥಿರ ಆಸ್ತಿಯನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಜಿಲ್ಲಾಽಕಾರಿ ಕ್ರಮ ವಹಿಸುವಂತೆ ಉನ್ನತ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯಗಳು) ಸಕಾರದ ಅಽÃನ ಕಾರ್ಯದರ್ಶಿ ಆದೇಶದಲ್ಲಿ ಸೂಚಿಸಿದ್ದಾರೆ.

    ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಅನ್ನು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆಡಳಿತ ಕಾರ್ಯವ್ಯಾಪ್ತಿಗೆ ಹಸ್ತಾಂತರಿಸುವ ಕುರಿತು ಸರ್ಕಾರದಿಂದ ಆದೇಶ ಬಂದಿದೆ. ಈ ಸಂಬAಧ ಬೆಳಗಾವಿ ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು.

    – ದಿವ್ಯ ಪ್ರಭು, ಜಿಲ್ಲಾಽಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts