More

    ದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

    ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಾಲಯದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

    ವಿಜಯನಗರ ಆರಸರ ಆಡಳಿತಾವಧಿಯ ವಾಲಿಪರ್ವತದಲ್ಲಿ ದೇಗುಲ ನಿರ್ಮಾಣವಾಗಿದ್ದು, ಆನೆಗೊಂದಿ ಆರಸರ ಅರಾಧ್ಯದೈವವಾಗಿದೆ. 2021ರಲ್ಲಿ ದೇಗುಲ ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ, ಮೂರ್ತಿಯನ್ನು ಸ್ಥಾನಪಲ್ಲಟ ಮಾಡಲಾಯಿತು.

    ದೇವಾಲಯವನ್ನು ವಿಜಯನಗರ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಗರ್ಭಗುಡಿ ಕಾಮಗಾಗಿ ಪೂರ್ಣಗೊಂಡಿದೆ. ಮೂಲಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆಗಾಗಿ ೆ.19ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಲಾಕರ್ಷಕ ಹೋಮ, ಲಲಿತ ಸಹಸ್ರನಾಮಾ ಪಾರಾಯಣ, ಗಣಪತಿ ಹೋಮ, ಕಳಸಾರೋಹಣ, ಪ್ರಾಣಪ್ರತಿಷ್ಠಾಪನೆ, ಶತ ಚಂಡಿಯಾಗ, ಪೂರ್ಣಾಹುತಿ ಮತ್ತು ಸಾಮೂಹಿಕ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಬ್ರಾಹ್ಮಿ ಮೂಹೂರ್ತದಲ್ಲಿ ಆರಂಭವಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ, ಶಾಸಕ ಪರಣ್ಣಮುನವಳ್ಳಿ, ರಾಜ ವಂಶಸ್ಥರಾದ ಲಲಿತಾರಾಣಿ ರಾಯಲು, ರಾಜಾ ಶ್ರೀಕೃಷ್ಣದೇವರಾಯಲು, ಹರಿಹರ ದೇವರಾಲಯಲು, ತಹಸೀಲ್ದಾರ್ ಮಂಜುನಾಥ ಹಿರೇಮಠ,ದೇವಾಲಯದ ಮುಖ್ಯಸ್ಥ ವೇ.ಮೂ.ಬ್ರಹ್ಮಾನಂದಯ್ಯ ಸ್ವಾಮೀಜಿ, ವ್ಯವಸ್ಥಾಪಕ ರಾಜಣ್ಣ ಸ್ವಾಮಿ, ಎಪಿಎಂಸಿ ಮಾಜಿ ಸದಸ್ಯ ಚಂದ್ರಶೇಖರ್ ಅಕ್ಕಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts