More

    ಶೌಚಗೃಹ-ಅಂಗನವಾಡಿ ಕಟ್ಟಡ ನಿರ್ಮಿಸಿ

    ಗಂಗಾವತಿ: ಸಂಗಮೇಶ್ವರ ಕ್ಯಾಂಪ್‌ನಲ್ಲಿ ಮಹಿಳಾ ಶೌಚಗೃಹ ಮತ್ತು ಅಂಗನವಾಡಿ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘ (ಪಿಕೆಕೆಎಸ್)ದ ತಾಲೂಕು ಸಮಿತಿ ಸದಸ್ಯರು ಶುಕ್ರವಾರ ವಡ್ಡರಹಟ್ಟಿ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಕೆ.ಹುಸೇನಪ್ಪ ಮಾತನಾಡಿ, ಸಂಗಮೇಶ್ವರ ಕ್ಯಾಂಪ್‌ನಲ್ಲಿ 300 ಕುಟುಂಬಗಳಿದ್ದು, ಅತಿ ಸಣ್ಣ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಜಾಗದ ಕೊರತೆಯಿದೆ. ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕಾಗಿ ರೈತ ಕೃಷಿ ತರಬೇತಿ ಕೇಂದ್ರದ ಬಳಿ ಜಾಗವಿದ್ದರೂ ಅವಕಾಶ ನೀಡುತ್ತಿಲ್ಲ. ಅಂಗನವಾಡಿ ಕಟ್ಟಡ ಬಾಡಿಗೆ ಮನೆಯಲ್ಲಿದ್ದು, ಮೂಲ ಸೌಕರ್ಯಗಳಿಲ್ಲ. ಶೌಚಗೃಹ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣದ ಜತೆಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು. ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಸ್ವಚ್ಛತಾ ಕಾಮಗಾರಿ ಕೈಗೊಳ್ಳ್ಳುವಂತೆ ಒತ್ತಾಯಿಸಿದರು.

    ಪಿಡಿಒ ಕಾಶಿನಾಥ್‌ಗೆ ಮನವಿ ಸಲ್ಲಿಸಲಾಯಿತು. ಗ್ರಾಪಂ ಸದಸ್ಯರಾದ ಸೈಯದ್ ಮಿರಾಜ್, ಶಾಂತಮ್ಮ, ಚಾಂದಬೀ, ಸಂಘದ ಪದಾಧಿಕಾರಿಗಳಾದ ಎಂ.ಬಸವರಾಜ್, ಮರಿನಾಗಪ್ಪ ಡಗ್ಗಿ, ನಾಗಮ್ಮ, ಚಂದಮ್ಮ, ಸೋಮಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts