More

    ಡ್ಯಾಂನಿಂದ ನದಿಗೆ 1.60ಲಕ್ಷ ಕ್ಯೂಸೆಕ್ ನೀರು: ಆನೆಗೊಂದಿ ಭಾಗದ ಕೆಲ ಗ್ರಾಮಗಳ ಸಂಪರ್ಕ ಕಡಿತ

    ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿ ತೀರಕ್ಕೆ ಪ್ರಸಕ್ತ ಸಾಲಿನಲ್ಲಿ 2ನೇ ಬಾರಿ ಹೆಚ್ಚುವರಿ ನೀರು ಹರಿದುಬರುತ್ತಿದ್ದು, ಆನೆಗೊಂದಿ ಮತ್ತು ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯಲ್ಲಿನ ಕೆಲ ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ.

    ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗಿದ್ದರಿಂದ ನದಿ ತೀರಕ್ಕೆ 1.60ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ನವವೃಂದಾವನ ಗಡ್ಡಿ, ವಿರೂಪಾಪುರ ಗಡ್ಡಿ, ಋಷ್ಯಮುಖ ಪರ್ವತ ಸಂಪರ್ಕ ಕಡಿತಗೊಂಡಿದೆ. ಆನೆಗೊಂದಿಯ ಶ್ರೀಕೃಷ್ಣ ದೇವರಾಯ ಸಮಾಧಿ (64 ಕಂಬಗಳ ಶಿಲಾಮಂಟಪ), ಚಿಂತಾಮಣಿಯ ಖೂಳಮಂಟಪ ಜಲಾವೃತಗೊಂಡಿದ್ದು, ಕಡೇಬಾಗಿಲು ಸೇತುವೆ ಮತ್ತು ವಿರುಪಾಪುರ ಗಡ್ಡಿ ಬಳಿಯ ಅಕ್ವಡೆಕ್ಟ್ ಅರ್ಧಭಾಗ ಮುಳುಗಿದೆ. ಚಿಕ್ಕಜಂತಕಲ್, ವಿಪ್ರ, ಸಿಂಗನಗುಂಡ, ಹಳೇ ಆಯೋಧ್ಯೆ, ಗೂಗಿಬಂಡಿಕ್ಯಾಂಪ್, ವಿನೋಭಾನಗರದ ಬಳಿ ಭತ್ತದ ಗದ್ದೆಗೆ ನೀರು ನುಗ್ಗಿದ್ದು, ಹೆಬ್ಬಾಳ ಬಳಿ ಹಳಕ್ಕೆ ನೀರು ಬಂದಿದ್ದರಿಂದ ಪಂಪ್‌ಸೆಟ್ ಮನೆಗಳು ಜಲಾವೃತಗೊಂಡಿದೆ. ಯಾಂತ್ರಿಕ ದೋಣಿ ಸಂಚಾರ ಮತ್ತು ಮೀನುಗಾರಿಕೆ ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು, ಕಂದಾಯ ನಿರೀಕ್ಷಕ ಮತ್ತು ಗ್ರಾಮಲೆಕ್ಕಾಧಿರಿಗಳನ್ನು ಕೇಂದ್ರ ಸ್ಥಾನ ಬಿಡದಂತೆ ಆದೇಶಿಸಲಾಗಿದೆ.

    ಡ್ಯಾಂನಿಂದ ನದಿಗೆ 1.60ಲಕ್ಷ ಕ್ಯೂಸೆಕ್ ನೀರು: ಆನೆಗೊಂದಿ ಭಾಗದ ಕೆಲ ಗ್ರಾಮಗಳ ಸಂಪರ್ಕ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts