More

    ನಿಲ್ದಾಣದೊಳಗೆ ಬಸ್ ಬಾರದಿದ್ದರೆ ತಿಳಿಸಿ- ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

    ಗಂಗಾವತಿ: ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಕ್ಕಾಗಿ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಬಸ್‌ಗಳ ಸಂಚಾರಕ್ಕೆ ವಿಶೇಷ ಕಾಳಜಿವಹಿಸಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ಬಸಾಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ಗುರುವಾರ ಉದ್ಘಾಟಿಸಿ ಮಾತನಾಡಿದರು. ದಶಕಗಳ ಹಿಂದೆ ಬಸ್ ನಿಲ್ದಾಣ ಉದ್ಘಾಟನೆಯಾಗಬೇಕಿತ್ತಾದರೂ ಕಾನೂನಾತ್ಮಕ ತೊಡಕಿನಿಂದ ನನೆಗುದಿಗೆ ಬಿದ್ದಿತ್ತು. 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ವೇಗ, ವೇಗದೂತ ಸೇರಿ ಎಲ್ಲ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದ್ದು, ಲೋಪ ಕಂಡು ಬಂದರೆ ಗಮನಕ್ಕೆ ತನ್ನಿ. ನಿಲ್ದಾಣದಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

    ಬಸ್ ನಿಲ್ದಾಣದಲ್ಲಿ ಬಸ್‌ಗಳ ಕಡ್ಡಾಯ ಪ್ರವೇಶ, ವಿದ್ಯುತ್ ಸಂಪರ್ಕ, ಶುದ್ಧ ಕುಡಿವ ನೀರು ಸೇರಿ ಇತರ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಉಪಾಧ್ಯಕ್ಷ ಶ್ರೀಕಾಂತ, ಸದಸ್ಯರಾದ ಮಲ್ಲಯ್ಯಸ್ವಾಮಿ, ಕನಕರಾಜು, ಹುಲಿಗೆಮ್ಮ, ಪಿಡಿಒ ಇಂದಿರಾ, ಅಕ್ರಮ ಸಕ್ರಮ ಸಮಿತಿ ಸದಸ್ಯ ಸಿದ್ದಲಿಂಗಪ್ಪ ಗಡ್ಡಿಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಮಾಜಿ ಸದಸ್ಯ ಯಮನಪ್ಪ ವಿಠಲಾಪುರ, ಮುಖಂಡರಾದ ವಿರುಪಣ್ಣ ಡಂಬರ, ಆರ್.ದೇವಾನಂದ, ಪ್ರಸಾದ, ದೇವಪ್ಪ ಕಾಯಗಡ್ಡಿ, ಸಿದ್ದಪ್ಪ ಬಾಳಿಕಾಯಿ, ಹನುಮಂತಪ್ಪ ಸರಿಗಮ, ಡಿಪೋ ವ್ಯವಸ್ಥಾಪಕ ಸಂಜೀವಮೂರ್ತಿ, ಸಹಾಯಕ ಅಧಿಕಾರಿಗಳಾದ ಆರ್. ಟಿ.ಜಾಧವ್, ಎಂ.ಎಸ್.ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts