More

    ಸ್ಥಾಯಿ ಸಮಿತಿ ರಚನೆ ಸಭೆ ರದ್ದು

    ಗಂಗಾವತಿ: ನಗರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ರಚನೆಗಾಗಿ ಸೋಮವಾರ ಆಯೋಜಿಸಿದ್ದ ವಿಶೇಷ ಸಾಮಾನ್ಯಸಭೆ ಆಡಳಿತ ಮತ್ತು ವಿಪಕ್ಷ ಸದಸ್ಯರ ಗೈರಿನಿಂದಾಗಿ ರದ್ದಾಗಿದ್ದು, ಆಡಳಿತ ಪಕ್ಷದಲ್ಲಿ ಗೊಂದಲ ಬಹಿರಂಗಗೊಂಡಿದೆ.

    ಹೊಸ ಅರ್ಥಿಕ ವರ್ಷಕ್ಕೊಮ್ಮೆ ಸ್ಥಾಯಿ ಸಮಿತಿ ರಚಿಸಲಾಗುತ್ತಿದ್ದು, ಐವರು ಸದಸ್ಯರನ್ನು ಚುನಾಯಿಸಬೇಕಿದೆ. ಸಮಿತಿ ರಚನೆಗೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಸೂಚಿಸಿದ್ದರಿಂದ ವಿಶೇಷ ಸಾಮಾನ್ಯ ನಿಗದಿಪಡಿಸಲಾಗಿತ್ತು. ಉಪಾಧ್ಯಕ್ಷೆ ಸ್ಥಾನ ರದ್ದತಿ ಹಿನ್ನೆಲೆಯಲ್ಲಿ 34 ಸದಸ್ಯರಿಗೆ ಅಧಿಕಾರವಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅವಕಾಶವಿದೆ. ಸಮಿತಿ ರಚನೆಗೆ ಎಲ್ಲ ವ್ಯವಸ್ಥೆಯಾಗಿದ್ದರೂ, 34ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಪಾರ್ವತೆಮ್ಮ ಚೌವ್ಹಾಣ ಮಾತ್ರ ಸಭೆಗೆ ಹಾಜರಾಗಿದ್ದರು.

    ಸಭೆ ಕರೆಯಲು ಸೂಚಿಸಿದ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಸಹಿತ ಎಲ್ಲ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಬರಲಿಲ್ಲ. ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆ 12 ಗಂಟೆಯಾದರೂ ಸದಸ್ಯರು ಬಾರದಿದ್ದರಿಂದ ರದ್ದುಪಡಿಸಲಾಗಿತ್ತು. ೆ.14ರಂದು ಸಭೆ ಆಯೋಜಿಸುವಂತೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಲಿಖಿತ ರೂಪದಲ್ಲಿ ಮನವಿ ಮಾಡಿದರು.

    ಕಾಂಗ್ರೆಸ್‌ಗೆ ಅವಕಾಶವಿದ್ದರೂ ಸದಸ್ಯರ ಆಯ್ಕೆ ಗೊಂದಲದಿಂದ ಭಿನ್ನಾಭಿಪ್ರಾಯ ಕಂಡುಬಂದಿದೆ. ಅಧ್ಯಕ್ಷ ಸ್ಥಾನಕ್ಕೆ ಎ್.ರಾಘವೇಂದ್ರ, ಸೋಮನಾಥ ಭಂಡಾರಿ ಮತ್ತು ಮುಷ್ತಾಕ್‌ಅಲಿ ನಡುವೆ ಪೈಪೋಟಿಯಿದ್ದು, ಬಣಗಳ ಪ್ರತಿಷ್ಠೆಯಿಂದ ನನೆಗುದಿಗೆ ಬಿದ್ದಿದೆ. ವಿಪಕ್ಷ ಬಿಜೆಪಿಗೆ ಅವಕಾಶವಿದ್ದರೂ, ಶಾಸಕ ಮತ್ತು ಸಂಸದರು ಭಾಗವಹಿಸಬೇಕಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಈ ಹಿಂದೆ ಹಲವು ಬಾರಿ ಮುಖಭಂಗ ಅನುಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಯತ್ನಿಸಲಿಲ್ಲ. ಸಭೆ ರದ್ದುಪಡಿಸಿದ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ಸದಸ್ಯರು ಸಭೆಗೆ ಬಾರದಿದ್ದರಿಂದ ರದ್ದುಪಡಿಸಲಾಗಿದೆ. ಪೌರಾಡಳಿತ ಕಾಯ್ದೆಯನ್ವಯ 30 ದಿನಗಳವರೆಗೂ ಸಭೆ ಆಯೋಜಿಸಲು ಅವಕಾಶವಿಲ್ಲ ಎಂದರು.

    ಗೊಂದಲ ನಿವಾರಣೆಗೆ ಕೈ ನಿರಾಸಕ್ತಿ: ಸ್ಥಾಯಿ ಸಮಿತಿ ರಚನೆಗೆ ಕಳೆದ ವರ್ಷವೂ ಗೊಂದಲವಾಗಿದ್ದು, ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿನ ನಡುವೆ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಸಮಿತಿ ರದ್ದತಿಗಾಗಿ ವಿಪಕ್ಷ ಸದಸ್ಯರು ಪತ್ರ ವ್ಯವಹಾರ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಬಾರಿ ಕಾಂಗ್ರೆಸ್‌ನಲ್ಲಿ ಗೊಂದಲ ಶುರುವಾಗಿದ್ದು, ನಿವಾರಣೆಯಲ್ಲಿ ಹೈಕಮಾಂಡ್ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಎ್.ರಾಘವೇಂದ್ರ, ಹುಲಿಗೆಮ್ಮ ಕಿರಿಕಿರಿ, ಪಾರ್ವತೆಮ್ಮ ಕಚೇರಿಗೆ ಬಂದರೂ ಸಭಾಂಗಣದತ್ತ ಕಾಲಿಡಲಿಲ್ಲ. ಹೈಕಮಾಂಡ್ ಇಕ್ಬಾಲ್ ಅನ್ಸಾರಿ ಬೆಂಬಲಿಗ ಸದಸ್ಯರಾದ ಶಾಮೀದ್ ಮನಿಯಾರ್ ಮತ್ತು ಖಾಸೀಂಸಾಬ್ ಗದ್ವಾಲ್ ನಡುವಿನ ಪ್ರತಿಷ್ಟೆಯಿಂದ ಆಯ್ಕೆ ತೊಡಕಾಗಿದೆ ಎನ್ನಲಾಗಿದೆ. ಅಭಿಪ್ರಾಯ ಸಂಗ್ರಹಣೆಗೆ ಸದಸ್ಯರಿಗೆ ಕರೆ ಮಾಡಿದರೂ ಒಬ್ಬರೂ ಕರೆ ಸ್ವೀಕರಿಸಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts