More

    ಪ್ರತಿಭೆಗಳ ಗುರುತಿಸುವುದು ಶ್ರೇಷ್ಠ ಕಾರ್ಯ: ವಕೀಲ ಆರ್.ದೇವಾನಂದ ಅಭಿಮತ


    ಗಂಗಾವತಿ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಪ್ರೋತ್ಸಾಹದಾಯಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥ ಹಾಗೂ ವಕೀಲ ಆರ್.ದೇವಾನಂದ ಸಲಹೆ ನೀಡಿದರು.

    ನಗರದ ಶ್ರೀಕೃಷ್ಣ ಸಭಾಂಗಣದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೈಕ್ಷಣಿಕ ಬೆಳವಣಿಗೆಯಾದರೆ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದ್ದು, ವಿದ್ಯಾರ್ಥಿಗಳು ಗಮನಹರಿಸಬೇಕು. ಪ್ರತಿಭೆಗಳನ್ನು ಗುರುತಿಸುವುದು ಶ್ರೇಷ್ಠ ಕಾರ್ಯ ಎಂದರು.

    ವಕೀಲ ಮೈಲಾರಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಕಾರಣರಾದವರನ್ನು ನಿತ್ಯ ಸ್ಮರಿಸಬೇಕು ಎಂದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್ಸಿ, ಎಸ್ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ರವಿ ಅಂಗಡಿ, ಜಿಪಂ ಮಾಜಿ ಸದಸ್ಯ ಪರಶುರಾಮಪ್ಪ, ಪದಾಧಿಕಾರಿಗಳಾದ ಗಂಗಣ್ಣ ಸಿದ್ದಾಪುರ, ಯು.ಲಕ್ಷ್ಮಣ, ಮಾರೇಶ ಮುಷ್ಟೂರು, ಹುಲಿಗೇಶ ದೇವರಮನಿ, ಹಂಪೇಶ ಹರಿಗೋಲು, ಪ್ರಮೋದ ಬೆಂಗಳೂರು, ಸೋಮಲಿಂಗಪ್ಪ ಕುಂಟೋಜಿ, ಆದೆಪ್ಪ ಸಿಂಗನಾಳ್, ಶಿವಪ್ಪ ಮಾದಿಗ, ಮಲ್ಲಿಕಾರ್ಜುನ ಸ್ವಾಮಿ, ಶರಣಪ್ಪ ನಾಯಕ, ಸೋಮಲಿಂಗಪ್ಪ ಕುಂಟೋಜಿ, ರುದ್ರೇಶ್ ದೇವರಮನಿ ಅಂಕೇಶ, ಕೆ.ಸುಭಾಷ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts