More

    ಪಂಚರತ್ನ ಯೋಜನೆಗಳಿಗೆ ಜನಮನ್ನಣೆ

    ಗಂಗಾವತಿ: ಜೆಡಿಎಸ್ ಆಡಳಿತಾವಧಿಯಲ್ಲಿ ರೈತ ಮತ್ತು ಯುವಶಕ್ತಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ರೂಪಿಸಿರುವ ಪಂಚರತ್ನ ಯೋಜನೆಗಳಿಗೆ ಜನಮನ್ನಣೆ ದೊರೆತಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಶೇಕ್ ನಬೀಸಾಬ್ ಹೇಳಿದರು.

    ನಗರದ ಇಸ್ಲಾಂಪುರದ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ತಾಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಜಾರಿಗೆ ತಂದ ಸಾಲಮನ್ನಾ ಮತ್ತು ಮಾಸಾಶನ ಹೆಚ್ಚಳ ಯೋಜನೆಗಳು ಜನಪ್ರಿಯವಾಗಿವೆ. ಪಂಚರತ್ನ ಯೋಜನೆಗಳು ರೈತ, ಮಹಿಳೆ, ಯುವ ಸಬಲೀಕರಣಕ್ಕೆ ಪೂರಕವಾಗಿವೆ ಎಂದರು. ವಿವಿಧ ಪಕ್ಷಗಳ ಮಹಿಳಾ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು. ಪ್ರಮುಖರಾದ ಅಮೀನಾಬೇಗಂ, ಭವಾನಿ, ಅಕ್ಕಮಹಾದೇವಿ, ಕಮಲಾಕ್ಷ್ಮಿ, ಸುಮಾ, ಖಾಜಾಬನೀ, ರೇಷ್ಮಾ, ಶಮೀಮ್, ಜುಲೇಖಾ, ತಾಜುದ್ದೀನ್, ಅಸ್ೀ, ಮಹ್ಮದ್ ಯುಸ್ೂ, ದುರ್ಗಾ ಪ್ರಸಾದ್, ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts