More

  ಮರಗಳಿಗೆ ಕೀಟನಾಶಕ ಬಣ್ಣ ಬಳಿದು ಹೊಸ ವರ್ಷಾಚರಣೆ: ಢಣಾಪುರದ ಹಸಿರು ಬಳಗದ ಕಾರ್ಯ ಮಾದರಿ

  ಗಂಗಾವತಿ: ಹೊಸ ವರ್ಷವನ್ನು ತಾಲೂಕಿನ ಢಣಾಪುರದ ಯುವಕರು ವಿಭಿನ್ನ ರೀತಿಯಲ್ಲಿ ಆಚರಿಸಿದ್ದು, ಮರಗಳಿಗೆ ಕೀಟನಾಶಕ ಬಣ್ಣ ಬಳಿಯುವ ಮೂಲಕ ಪರಿಸರ ಕಾಳಜಿ ತೋರಿದರು.

  ಗ್ರಾಮದಲ್ಲಿ ಶನಿವಾರ ರಾತ್ರಿ ಸಂಚರಿಸಿದ ಯುವಕರು ಪರಿಸರ ರಕ್ಷಣೆ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಅಲ್ಲದೇ ಮರಗಳಿಗೆ ಕೀಟ ನಾಶಕ ಬಣ್ಣಗಳನ್ನು ಬಳಿಯುವ ಮೂಲಕ ವೃಕ್ಷಗಳನ್ನು ಗುರುತಿಸಿದರು. ಕೇಕ್ ಕತ್ತರಿಸುವುದು, ಪಾರ್ಟಿ ಮತ್ತು ಪಟಾಕಿ ಮೂಲಕ ಪರಿಸರ ಹಾಳು ಮಾಡುವ ಯುವಕರಿಗಿಂತ ಢಣಾಪುರದ ಹಸಿರು ಬಳಗ ಕಾರ್ಯ ವಿಭಿನ್ನವಾಗಿದ್ದು, ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಯಿತು.

  ಬಳಗದ ಪ್ರತಿನಿಧಿ ಹನುಮೇಶ ಭಾವಿಕಟ್ಟಿ ಮಾತನಾಡಿ, ಪರಿಸರ ರಕ್ಷಿಸಿದರೆ, ಆರೋಗ್ಯವಂತರಾಗಿರಲು ಸಾಧ್ಯ. ಇದೇ ಕಾರಣಕ್ಕಾಗಿ ಗ್ರಾಮದ ಮರಗಳಿಗೆ ಕೀಟನಾಶಕ ಬಣ್ಣ ಬಳಿದಿದ್ದು, ಅಲಂಕಾರದ ಜತೆಗೆ ಕೀಟ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಪರಿಸರ ರಕ್ಷಣೆ ಪೂರಕವಾಗಿದೆ ಎಂದರು. ಬಳಗದ ಶರಣಪ್ಪ, ಬಸವರಾಜ, ರಾಘವೇಂದ್ರ, ಗುರುರಾಜ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts