More

    ಸಹಕಾರಿ ಸಂಘಗಳು ಜನರ ಕಷ್ಟಗಳಿಗೆ ಸ್ಪಂದನೆ

    ಗಂಗಾವತಿ: ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಘಗಳು ಗ್ರಾಮಾಭಿವೃದ್ಧಿಗೆ ಪೂರಕವಾಗಿವೆ. ಅಲ್ಲದೆ ಸರ್ಕಾರದ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಪಿಎಸ್ಸೆಸ್ಸೆನ್ ಅಧ್ಯಕ್ಷ ಹೊನ್ನಪ್ಪ ನಾಯಕ ಹೇಳಿದರು.

    ಸಹಕಾರಿ ಸಂಘಗಳು ಗ್ರಾಮಾಭಿವೃದ್ಧಿಗೆ ಪೂರಕ

    ತಾಲೂಕಿನ ಮಲ್ಲಾಪುರ ಪಿಎಸ್ಸೆಸ್ಸೆನ್ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯಶಸ್ವಿ ಯೋಜನೆ ನೋಂದಣಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೃಷಿಪಯೋಗಿ ಹಲವು ಯೋಜನೆಗಳಿದ್ದು, ಸಹಾಯಧನದ ಸಾಲ ಸೌಲಭ್ಯಗಳಿವೆ. ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘಗಳು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಯಶಸ್ವಿನಿ ಯೋಜನೆ ಕುಟುಂಬಕ್ಕೆ ನೆರವಾಗಲಿದೆ ಎಂದರು.

    ಇದನ್ನೂ ಓದಿ: 10 ದಿನಗಳಲ್ಲೇ ವೈಎಸ್​ಆರ್​ ಕಾಂಗ್ರೆಸ್ ಪಕ್ಷ​ ತೊರೆದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು!

    ಯಶಸ್ವಿನಿ ಯೋಜನೆ ನೋಂದಣಿ, ಸೌಲಭ್ಯ ಮತ್ತು ಅರ್ಜಿ ಸಲ್ಲಿಕೆ ಕುರಿತು ಸಿಇಒ ಆರ್. ನವೀನಕುಮಾರ ಮಾಹಿತಿ ನೀಡಿದರು. ಸಹಕಾರಿ ಇಲಾಖೆ ತಾಲೂಕು ಅಧಿಕಾರಿ ಬಸಪ್ಪ ಗಾಳಿ, ಸಂಘದ ಉಪಾಧ್ಯಕ್ಷ ಎಚ್.ಎಂ.ವಿರೂಪಾಕ್ಷಯ್ಯಸ್ವಾಮಿ, ಮುಖಂಡರಾದ ವಿಜಯಕುಮಾರ, ಪಂಪಾಪತಿ, ಬಸವರಾಜ, ಚನ್ನಯ್ಯ, ಶಿವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts