More

    ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತಕ್ಕೆ ಆಕ್ರೋಶ

    ಗಂಗಾವತಿ: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕು ಆಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.

    ಜಿಲ್ಲಾ ಸಂಚಾಲಕ ಶರಣು ಗಡ್ಡಿ ಮಾತನಾಡಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಮಕ್ಕಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೈಕ್ಷಣಿಕ ಸಹಾಯ ಧನ ಎರಡು ವರ್ಷದಿಂದ ವಿತರಿಸಿಲ್ಲ. ಇತ್ತೀಚಿಗೆ ನಡೆದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ನೀಡಿದರೂ ಪ್ರಯೋಜನವಾಗಿಲ್ಲ.

    ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ. ಸಹಾಯಧನ ಕಡಿತದ ಆದೇಶ ಹಿಂಪಡೆಯುವುದು, ಬಾಕಿ ಸಹಾಯಧನ ವಿತರಣೆ, ವೈದ್ಯಕೀಯ, ಪಿಂಚಣಿ, ಹೆರಿಗೆ, ಮದುವೆ, ಅಂತ್ಯಕ್ರಿಯೆ ಸೇರಿ ಹಲವು ಸೌಲಭ್ಯಗಳ ಸಹಾಯಧನ ಸಮರ್ಪಕ ವಿತರಣೆ, ಹೊಸ ತತ್ರಾಂಶದಲ್ಲಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

    ತಾಲೂಕು ಘಟಕದ ಪದಾಧಿಕಾರಿಗಳಾದ ಸುರೇಶ್ ಉಪ್ಪಾರ, ಹುಲುಗಪ್ಪ, ಪರಸಪ್ಪ ವಡ್ಡರ್, ಹನುಮಂತ ವಡ್ಡರ್, ಶ್ಯಾಮ ಸುಂದರ್, ಶರಣು ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts