More

    ವಿಜಯನಗರ ಸಾಮ್ರಾಜ್ಯದ ಮೂಲ ಪುರುಷ

    ಗಂಗಾವತಿ: ಕರ್ನಾಟಕ ಸುವರ್ಣಸಂಭ್ರಮ ಹಿನ್ನೆಲೆಯಲ್ಲಿ ವಿಜಯನಗರ ಸಾಮ್ರಾಜ್ಯದ ಮೂಲ ಪುರುಷ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮನ ಜಾಗೃತಿ ರಥ ಯಾತ್ರೆಯನ್ನು ತಾಲೂಕಿನ ಬಸಾಪಟ್ಟಣದಲ್ಲಿ ಗುರುವಾರ ಸ್ವಾಗತಿಸಲಾಯಿತು.

    ಗಂಡುಗಲಿ ಕುಮಾರರಾಮನ ರಾಜ್ಯಭಾರ ಮತ್ತು ಸಮಾಜಿಕ ಕಳಕಳಿಯ ಆಡಳಿತದ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಕಾರಟಗಿಯ ಸಮಾನಮನಸ್ಕರು ರಥಯಾತ್ರೆ ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ.

    ಬಸಾಪಟ್ಟಣಕ್ಕೆ ಆಗಮಿಸಿ ರಥಯಾತ್ರೆಗೆ ಪುಷ್ಪಾರ್ಪಣೆಯೊಂದಿಗೆ ಸ್ವಾಗತಿಸಿದ ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಪರನಾರಿ ಸಹೋದರ ಖ್ಯಾತಿಯ ಗಂಡುಗಲಿ ಕುಮಾರರಾಮನ ಸುವರ್ಣ ಆಡಳಿತದ ಬಗ್ಗೆ ಜನಪದಗಳಲ್ಲೂ ಉಲ್ಲೇಖವಾಗಿದ್ದು, ಕುಮ್ಮಟದುರ್ಗದ ಇತಿಹಾಸ ಪ್ರತಿಯೊಬ್ಬರಿಗೂ ತಿಳಿಸಬೇಕಿದೆ ಎಂದರು.

    ರಥಯಾತ್ರೆ ಉದ್ದೇಶ, ಕುಮ್ಮಟ ದುರ್ಗದಲ್ಲಿ ರಾಜ್ಯೋತ್ಸವ ಕುರಿತು ಗಂಡುಗಲಿ ಕುಮಾರರಾಮ ಸೇನೆ ಅಧ್ಯಕ್ಷ ಎಚ್. ರಾಜೇಶ ನಾಯಕ ದೊರೆ ಮಾತನಾಡಿದರು. ವಾಲ್ಮೀಕಿ ನಾಯಕ ಸಮಾಜದ ಕಾರಟಗಿ ಭಾಗದ ಪ್ರಮುಖ ಗದ್ದೆಪ್ಪ ನಾಯಕ, ಮುಖಂಡರಾದ ರಮೇಶ, ಸೋಮನಾಥ, ಶ್ರೀನಿವಾಸ ಸಿಂಗಾಪುರ,ಯಂಕಪ್ಪ ಕಟ್ಟಿಮನಿ, ನೂರ್‌ಸಾಬ್, ಹನುಮಂತಪ್ಪ ತೊಂಡಿಹಾಳ್, ಹರನಾಯಕ, ಹನುಮಂತಪ್ಪ ಸೂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts