More

    ರಸಗೊಬ್ಬರ ಕೊರತೆ ನಿವಾರಿಸಿ; ಗಂಗಾವತಿಯಲ್ಲಿ ತ್ರಿವಳಿ ತಾಲೂಕು ರೈತರ ಪ್ರತಿಭಟನೆ

    ಗಂಗಾವತಿ: ರಸಗೊಬ್ಬರ ಕೊರತೆ ನಿವಾರಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕಾರಟಗಿ, ಕನಕಗಿರಿ ಮತ್ತು ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳ ರೈತರು ನಗರದ ಕೃಷಿ ಇಲಾಖೆ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

    ಎಪಿಎಂಸಿ ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ ಮಾತನಾಡಿ, ನಾಟಿ ಮಾಡಿದ ಭತ್ತದ ಬೆಳೆಗಳಿಗೆ ರಸಗೊಬ್ಬರದ ಅಗತ್ಯವಿದೆ. ಆದರೆ, ತ್ರಿವಳಿ ತಾಲೂಕಿನಲ್ಲಿ ಯೂರಿಯಾ, ಪೋಟ್ಯಾಶ್ ಸೇರಿ ರಸಗೊಬ್ಬರ ಕೊರತೆ ಹೆಚ್ಚಾಗಿದ್ದು, ಎಲ್ಲಿಯೂ ದೊರೆಯುತ್ತಿಲ್ಲ. ಕೆಲವೆಡೆ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದು, ಅಧಿಕಾರಿಗಳು ಗಮನಹರಿಸುತ್ತಿಲ್ಲ. ಸರ್ಕಾರ ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತದೆ. ಆದರೆ, ರೈತರಿಗೆ ಅಗತ್ಯ ಯೂರಿಯಾ ಸಿಗುತ್ತಿಲ್ಲ.ಸುಳ್ಳು ಹೇಳುವ ಸಚಿವರಿಗೆ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ. ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್‌ಗೆ ಮನವಿ ಸಲ್ಲಿಸಿದರು. ರೈತರಾದ ವಿ.ಪ್ರಸಾದ,ಲಿಂಗಪ್ಪ, ಸಿ.ಎಚ್.ಸತ್ಯನಾರಾಯಣ, ಜಿ.ಸಾಂಬಮೂರ್ತಿ, ಕೆ.ವೀರೇಶ, ವೈ.ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts