More

    ರೈತರ ಬೇಡಿಕೆಯಂತೆ ರಸಗೊಬ್ಬರ ಪೂರೈಕೆ: ಗಂಗಾವತಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಹೇಳಿಕೆ

    ಗಂಗಾವತಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅಗತ್ಯ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರ ಬೇಡಿಕೆಯಂತೆ ಪೂರೈಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಹೇಳಿದರು.

    ನಗರದ ಹರಿ ಅಗ್ರೋ ಏಜೆನ್ಸಿ ಗೋದಾಮಿನಲ್ಲಿ ಸಂಗ್ರಹಿಸಿರುವ ರಸಗೊಬ್ಬರ ದಾಸ್ತಾನು ಗುರುವಾರ ಪರಿಶೀಲಿಸಿ ಮಾತನಾಡಿದರು. ಗಂಗಾವತಿ ಮತ್ತು ಕಾರಟಗಿಯಲ್ಲಿ ಭತ್ತದ ನಾಟಿ ಕಾರ್ಯ ಶೇ.45 ಪೂರ್ಣಗೊಂಡಿದೆ. ಯೂರಿಯಾ 4315 ಮೆಟ್ರಿಕ್ ಟನ್, ಡಿಎಪಿ 723, ಎಂಒಪಿ 215, ಕಾಂಪ್ಲೆಕ್ಸ್ ರಸಗೊಬ್ಬರ 7013, ಎಸ್‌ಎಸ್‌ಪಿ 186 ಮೆಟ್ರಿಕ್ ಟನ್ ದಾಸ್ತಾನಿದ್ದು, ಕೊರತೆಯಿಲ್ಲ. ರೈತರು ಅಧಿಕೃತ ರಸಗೊಬ್ಬರ ಮಾರಾಟಗಾರರಲ್ಲಿ ಖರೀದಿಸಬೇಕಿದ್ದು, ಕಡ್ಡಾಯವಾಗಿ ಬಿಲ್ ಪಡೆಯಬೇಕು. ಕೃಷಿ ಪರಿಕರ ಮಾರಾಟ ಮಳಿಗೆ ಮತ್ತು ಪಿಎಸ್ಸೆಸ್ಸೆನ್‌ನಲ್ಲೂ ಮಾರಾಟದ ವ್ಯವಸ್ಥೆಯಿದೆ. ಅಗತ್ಯ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆ ಕಚೇರಿಯಲ್ಲಿ ಪಡೆಯಬಹುದು ಎಂದರು. ಗೋದಾಮು ಮುಖ್ಯಸ್ಥ ಎನ್.ಹರೀಶ್ ಇದ್ದರು.

    ಅಂಗಡಿ ಪರವಾನಗಿ ಅಮಾನತು
    ರಸಗೊಬ್ಬರ ಮಾರಾಟ ಪರವಾನಗಿ ನಿಯಮ ಉಲ್ಲಂಸಿದ ್ದ ಬಸಾಪಟ್ಟಣದ ಮೆ.ಚನ್ನಮಲ್ಲಿಕಾರ್ಜುನ ಟ್ರೇಡಿಂಗ್ ಕಂಪನಿ ಪರವಾನಗಿ ಅಮಾನತು ಮಾಡಲಾಗಿದೆ ಎಂದು ಸಹಾಯಕ ಕೃಷಿನಿರ್ದೇಶಕ ಸಂತೋಷ ಪಟ್ಟದಕಲ್‌ತಿಳಿಸಿದರು. ನಿಯಮದಂತೆ ದರಪಟ್ಟಿ ಮತ್ತು ದಾಸ್ತಾನು ಮಾಹಿತಿ ಹಾಕಿಲ್ಲ. ರೈತರಿಗೆ ನಿಗದಿತ ಬಿಲ್ ನೀಡಿಲ್ಲ. ಅನುಮತಿ ಪಡೆಯದೆ ರಸಗೊಬ್ಬರ ಮಾರಾಟ ಮಾಡಿರುವುದು, ದಾಸ್ತಾನು ವಹಿ ಮತ್ತು ಮಾರಾಟದ ವಿವರಗಳನ್ನು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸಿಲ್ಲ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ನೋಟಿಸ್ ನೀಡಿದರೂ, ಉತ್ತರ ನೀಡಿಲ್ಲ. ಇದೇ ಕಾರಣಕ್ಕಾಗಿ ಪರವಾನಗಿ ಅಮಾನತು ಮಾಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts