More

    ಎಲ್ಲದ್ದಕ್ಕೂ ದಲಿತ ಯುವಕರ ಟಾರ್ಗೆಟ್ ಮಾಡಬೇಡಿ: ಮಾದಿಗ ದಂಡೋರ ಕಾರ್ಯಾಧ್ಯಕ್ಷ ಹುಸೇನಪ್ಪ ಸ್ವಾಮಿ ಮನವಿ

    ಗಂಗಾವತಿ: ವಿವಿಧ ಪ್ರಕರಣಗಳಲ್ಲಿ ದಲಿತ ಯುವಕರನ್ನೇ ಗುರಿ ಮಾಡುತ್ತಿದ್ದು, ಮುಖ್ಯವಾಹಿನಿಗೆ ಬರಲು ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ಮಾದಿಗ ದಂಡೋರ ಕಾರ್ಯಾಧ್ಯಕ್ಷ ಹುಸೇನಪ್ಪ ಸ್ವಾಮಿ ಮಾದಿಗ ಹೇಳಿದರು.

    ನಗರದ ಗಾಂಧಿನಗರದ ಶ್ರೀ ಸ್ವಾಮಿ ವಿವೇಕಾನಂದ ಗ್ರಂಥಾಲಯದಲ್ಲಿ ಪೊಲೀಸ್ ಇಲಾಖೆ ಭಾನುವಾರ ಏರ್ಪಡಿಸಿದ್ದ ದಲಿತರ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ನಡೆದ ಘಟನೆಯಿಂದ ಕೆಲವರನ್ನು ರೌಡಿಶೀಟರ್ ಸೇರಿ ವಿವಿಧ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಪರಿವರ್ತನೆಯಾಗಿದ್ದರೂ, ಕೇಸ್‌ನಿಂದ ಹೊರಬರಲಾಗುತ್ತಿಲ್ಲ. ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್, ಇತರ ಕಂಪನಿಗಳಿಂದ ಗೃಹೋಪಯೋಗಿ ಸಾಲ ದೊರೆಯುತ್ತಿಲ್ಲ. ಬೇರೆ ಸಮುದಾಯದವರೂ ಗದ್ದಲ ನಡೆಸಿದರೂ ಗಾಂಧಿನಗರದ ಯುವಕರನ್ನೇ ಟಾರ್ಗೇಟ್ ಮಾಡುತ್ತಿದ್ದು, ವಿಚಾರಣೆಗೆಂದು ಪೊಲೀಸರು ವಶಕ್ಕೆ ಪಡೆಯುತ್ತಿರುವುದು ಸರಿಯಲ್ಲ. ಬದಲಾವಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

    ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಮಾತನಾಡಿ, ದಲಿತ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಬ್ಯಾಂಕ್ ಸೇರಿ ಸರ್ಕಾರಿ ಇಲಾಖೆಯಿಂದ ಸೌಲಭ್ಯ ಒದಗಿಸಲಾಗುತ್ತಿದ್ದು, ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸಲಾಗುವುದು. ಗಲಾಟೆ, ಗಲಭೆ ಸೇರಿ ಇತರ ಕಾನೂನುಬಾಹಿರ ಚಟುವಟಿಕೆಗಳಿಂದ ಯುವಕರು ಹೊರ ಬರಬೇಕು. ಅಗತ್ಯ ನೆರವು ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದರು. ನಗರ ಪಿಐ ಟಿ.ವೆಂಕಟಸ್ವಾಮಿ, ಪಿಎಸ್‌ಐ ವಿಲಾಸ್ ಬೋಸ್ಲೆ, ಗ್ರಂಥಾಲಯ ಮುಖ್ಯಸ್ಥ ಸಂಗಮೇಶ ಅಯೋಧ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts