More

    ಎಸ್‌ಕೆಡಿಆರ್‌ಡಿ ಸಂಸ್ಥೆಯಿಂದ ಜನಪರ ಕಾರ್ಯ: ನೀಲಕಂಠಪ್ಪ ನಾಗಶೆಟ್ಟಿ ಅಭಿಮತ

    ಗಂಗಾವತಿ: ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ (ಎಸ್‌ಕೆಡಿಆರ್‌ಡಿ)ಸಂಸ್ಥೆ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಜನಜಾಗೃತಿ ಜಿಲ್ಲಾ ಸಹ ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ ಹೇಳಿದರು.

    ವಿರುಪಾಪುರ ತಾಂಡಾದ ನಿವಾಸಿ ಬಡ ಮಹಿಳೆ ಗಂಗಮ್ಮಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಾತ್ಸಲ್ಯ ಯೋಜನೆಯಡಿ ಕೈಗೊಂಡಿರುವ ಮನೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ನಿರ್ಗತಿಕರಿಗೆ ಮಾಸಾಶನ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಧನ ಸಹಾಯ, ಸೂರಿಲ್ಲದ ಬಡ ಕುಟುಂಬಗಳ ಗುರುತಿಸಿ ವಸತಿ ವ್ಯವಸ್ಥೆ ಕಲ್ಪಿಸುವುದು ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದೆ ಎಂದರು. ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ಮಾತನಾಡಿ, ವಾತ್ಸಲ್ಯ ಯೋಜನೆಯಡಿ ಸುಸಜ್ಜಿತ ಮನೆ ನಿರ್ಮಿಸುತ್ತಿದ್ದು, ಕುಟುಂಬಕ್ಕೆ ಶೀಘ್ರ ಹಸ್ತಾಂತರಿಸಲಾಗುವುದು ಎಂದರು.

    ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜಾ ಮಾತನಾಡಿದರು. ಮೇಲ್ವಿಚಾರಕಿಯರಾದ ಜಯಲಕ್ಷ್ಮೀ, ಶಾರದಾ, ನಗರಸಭೆ ಮಾಜಿ ಸದಸ್ಯ ರಾಮಾನಾಯ್ಕ, ಬಿಜೆಪಿ ಮುಖಂಡ ದೇವಣ್ಣನಾಯಕ, ಸೇವಾಪ್ರತಿನಿಧಿ ರತ್ನಮ್ಮ ದರೋಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts