More

    ಕ್ರೀಡಾ ಸಾಧಕರಿಗೆ ಸರ್ವ ಕ್ಷೇತ್ರದಲ್ಲೂ ಮಾನ್ಯತೆ: ಶಾಸಕ ಪರಣ್ಣ ಮುನವಳಿ ಹೇಳಿಕೆ

    ಗಂಗಾವತಿ: ಶಾಲಾ ಮಕ್ಕಳು ಕ್ರೀಡಾಸಕ್ತಿ ಬೆಳೆಸಿಕೊಳ್ಳುವ ಮೂಲಕ ಉನ್ನತ ಸಾಧನೆಗೆ ವೇದಿಕೆ ಕಲ್ಪಿಸಿಕೊಳ್ಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

    ನಗರದ ತಾಲೂಕು ಕ್ರೀಡಾಂಗಣದಲ್ಲಿ ಇನ್ಸ್‌ಟಿಟ್ಯೂಟ್ ಆ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ 14 ವರ್ಷದೊಳಗಿನ ಅಂತರ್ ಶಾಲಾ ಮಕ್ಕಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡಾ ಸಾಧಕರಿಗೆ ಎಲ್ಲ ಕ್ಷೇತ್ರದಲ್ಲೂ ಮಾನ್ಯತೆಯಿದ್ದು, ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲು ಪಡೆಯಬಹುದಾಗಿದೆ. ನಗರದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಸಂಘಟನೆಗಳು ವೇದಿಕೆ ಕಲ್ಪಿಸುವಂತೆ ಸಲಹೆ ನೀಡಿದರು.

    ಕ್ಲಬ್ ಸಂಚಾಲಕ ವೀರಭದ್ರಗೌಡ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪಂದ್ಯಾವಳಿ ಆಯೋಜನೆ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು. ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಿದ್ದು, ಕ್ರೀಡಾ ಸಲಕರಣೆಗಾಗಿ ಬಿಜೆಪಿ ವಿವಿಧ ಭಾಷಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಕೃಷ್ಣಸಾ ದಲಬಂಜನ್ 10 ಸಾವಿರ ರೂ. ನೀಡಿದರು. ಬಿಜೆಪಿ ಮುಖಂಡ ಯಂಕಪ್ಪ ಕಟ್ಟಿಮನಿ, ಸೇಂಟ್ ಪಾಲ್ಸ್ ಸಂಸ್ಥೆ ಕಾರ್ಯದರ್ಶಿ ಸರ್ವೇಶ ವಸದ್, ಮುಖಂಡರಾದ ದೀಪಕ್ ಬಾಂಠಿಯಾ, ನವೀನ್ ಮಿರಜ್ಕರ್, ಶ್ರೀನಿವಾಸ ಧೂಳಾ, ಕ್ಲಬ್ ಪದಾಧಿಕಾರಿಗಳಾದ ನವೀನ್, ನರಹರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts