More

    ಕೆಲಸದಿಂದ ತೆಗೆದು ಹಾಕಿದ್ರೆ ಜೀವನ ನಿರ್ವಹಣೆ ಕಷ್ಟ; ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸದಸ್ಯರ ಆಕ್ರೋಶ

    ಗಂಗಾವತಿ: ಖಾಸಗಿ ಶಾಲೆಗಳಲ್ಲಿ ಮಾಹಿತಿ ನೀಡದೆ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕುತ್ತಿರುವ ಆಡಳಿತ ಮಂಡಳಿ ಕ್ರಮ ಖಂಡಿಸಿ ರಾಜ್ಯ ಖಾಸಗಿ ಶಿಕ್ಷಕರ ಬಳಗದ (ಖಾಸಗಿ ಶಿಕ್ಷಕರು ಮತ್ತು ಉಪನ್ಯಾಸಕರ ಒಕ್ಕೂಟ) ಸದಸ್ಯರು ನಗರದ ಬಿಇಒ ಕಚೇರಿ ಮುಂಭಾಗ ಗುರುವಾರ ಪ್ರತಿಭಟಿಸಿ ದೈಹಿಕ ಪರಿವೀಕ್ಷಕ ಎಚ್.ಭೋಗೇಶರಾವ್‌ಗೆ ಮನವಿ ಸಲ್ಲಿಸಿದರು.

    ಸಂಘದ ತಾಲೂಕು ಘಟಕದ ಅಧ್ಯಕ್ಷ ಮನೋಜಸ್ವಾಮಿಹಿರೇಮಠ ಮಾತನಾಡಿ, ಕರೊನಾ ಮುಂಜಾಗ್ರತೆ ಕ್ರಮಗಳ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ದುಡಿಮೆಯಿಲ್ಲದಂತಾಗಿದ್ದು, ಶಾಲೆ ಆರಂಭವಾಗುತ್ತಿದ್ದರೂ, ಕೆಲವೆಡೆ ಶಿಕ್ಷಕರನ್ನು ಕಾರಣ ನೀಡದೆ ಕೆಲಸದಿಂದ ತೆಗೆದುಹಾಕುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಶಾಲೆಗಳಲ್ಲೂ ಶಿಕ್ಷಕರನ್ನೂ ತೆಗೆದುಹಾಕುವ ಸಾಧ್ಯತೆಗಳಿವೆ. ಶಿಕ್ಷಣ ಅಧಿಕಾರಿಗಳು ಮಧ್ಯಪ್ರವೇಶಿಸಿ ಎಲ್ಲ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.

    ಕಾರ್ಯದರ್ಶಿ ಭೋಗೇಶ ದೇಶಪಾಂಡೆ, ಪದಾಧಿಕಾರಿಗಳಾದ ನೀಲಕಂಠ ಅರಹುಣಸಿ, ಬಸವರಾಜ ಕುಂಬಾರ, ವಿರೂಪಾಕ್ಷಗೌಡ ಪಾಟೀಲ್, ಕನಕಾಚಲ,ಮಂಜುನಾಥ ಗಟ್ಟಿ, ಬಸವರಾಜ ಕರಿಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts