More

    ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಕ್ರೀಡೆಗಳ ಪಾತ್ರ ಹಿರಿದು -ಶಾಸಕ ಪರಣ್ಣ ಮುನವಳ್ಳಿ ಅನಿಸಿಕೆ

    ಗಂಗಾವತಿ: ಬಲಿಷ್ಟ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಕ್ರೀಡೆಗಳ ಪಾತ್ರ ಮುಖ್ಯವಾಗಿದ್ದು, ದೈಹಿಕ ಸದೃಢಕ್ಕೆ ಪೂರಕವಾಗಿವೆ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

    ನಗರದ ಶ್ರೀ ಕೊಟ್ಟೂರೇಶ್ವರ ಪ.ಪೂ.ಕಾಲೇಜು ಮೈದಾನದಲ್ಲಿ ಪಿಯು ಶಿಕ್ಷಣ ಮಂಡಳಿ, ಎಚ್‌ಆರ್ ಸರೋಜಮ್ಮ ಮತ್ತು ಕಲ್ಮಠ ಸ್ವತಂತ್ರ ಪ.ಪೂ.ಕಾಲೇಜು ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ.ಪೂ.ಕಾಲೇಜುಗಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ದೈಹಿಕ ಮತ್ತು ಮಾನಸಿಕ ಸದೃಢಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

    ಕಲ್ಲುಮಠದ ಡಾ.ಕೊಟ್ಟೂರುಸ್ವಾಮೀಜಿ ಮಾತನಾಡಿದರು. ಕ್ರೀಡಾ ಕೂಟದಲ್ಲಿ 16 ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಪಂ ಅಧ್ಯಕ್ಷ ಮಹ್ಮದ್ ರಫೀ, ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ, ಸದಸ್ಯ ವಾಸುನವಲಿ, ಪೌರಾಯುಕ್ತ ಅರವಿಂದ ಜಮಖಂಡಿ, ನೌಕರರ ಸಂಘದ ತಾಲೂಕಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶರಣೇಗೌಡ ಮಾಲಿ ಪಾಟೀಲ್ ಇತರರಿದ್ದರು. ಶಿಕ್ಷಕ ಲಕ್ಷ್ಮಿಕಾಂತ ಹೇರೂರು ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts