More

    ಗಂಗಾವತಿ ನಗರಸಭೆ ಆಡಳಿತ ಕಾಂಗ್ರೆಸ್ ವಶ; ಅಧ್ಯಕ್ಷೆಯಾಗಿ ಮಾಲಾಶ್ರೀ ಸಂದೀಪ ಆಯ್ಕೆ

    ಒಂದು ಮತದಿಂದ ಬಿಜೆಪಿ ಪರಾಭವ

    ಗಂಗಾವತಿ: ತೀವ್ರ ಕುತೂಹಲ ಕೆರಳಿಸಿದ್ದ ನಗರದ ನಗರಸಭೆ ಅಧಿಕಾರ ಕಾಂಗ್ರೆಸ್‌ಗೆ ದಕ್ಕಿದ್ದು, ಒಂದು ಮತದಿಂದ ಬಿಜೆಪಿ ಪರಾಭವಗೊಂಡಿತು.

    ನಗರಸಭೆಯಲ್ಲಿ 17 ಕಾಂಗ್ರೆಸ್, 14 ಬಿಜೆಪಿ, 2 ಜೆಡಿಎಸ್ ಮತ್ತು 2 ಪಕ್ಷೇತರ ಸದಸ್ಯ ಆಯ್ಕೆಯಾಗಿದ್ದು, ಮ್ಯಾಜಿಕ್ ನಂಬರ್ 18. ನಗರದ ತಾಪಂ ಮಂಥನ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಆಯೋಜಿಸಲಾಗಿತ್ತು. ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 31ನೇ ವಾರ್ಡ್ ಸದಸ್ಯೆ ಮಾಲಾಶ್ರೀ ಸಂದೀಪ, ಬಿಜೆಪಿಯಿಂದ 20ನೇ ವಾರ್ಡ್ ಜಯಶ್ರೀ ಸಿದ್ದಾಪುರ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿ 26ನೇ ವಾರ್ಡ್‌ನ ಸುಧಾ ಸೋಮನಾಥ, ಬಿಜೆಪಿಯಿಂದ 2ನೇ ವಾರ್ಡ್ ಹೀರಾಬಾಯಿ ನಾಮಪತ್ರ ಸಲ್ಲಿಸಿದ್ದರು.

    ಬಿಜೆಪಿ ಸದಸ್ಯೆ ಸುಧಾ, ಜೆಡಿಎಸ್‌ನ ಅಬ್ದುಲ್‌ಜಬ್ಬಾರ್ ಬೆಂಬಲದೊಂದಿಗೆ ಕಾಂಗ್ರೆಸ್ ಸದಸ್ಯೆ ಮಾಲಾಶ್ರೀ 19 ಮತಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಶಾಸಕ ಪರಣ್ಣಮುನವಳ್ಳಿ, ಸಂಸದ ಕರಡಿ ಸಂಗಣ್ಣ, ಜೆಡಿಎಸ್ ಎಂ.ಡಿ.ಉಸ್ಮಾನ್, ಇಬ್ಬರ ಪಕ್ಷೇತರರ ಮತ ಪಡೆದರೂ ಬಿಜೆಪಿಯ ಜಯಶ್ರೀ ಸಿದ್ದಾಪುರ ಒಂದು ಮತದಿಂದ ಪರಾಭವಗೊಂಡರು.

    ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರ ಮತ್ತು ಪಕ್ಷೇತರ ಸದಸ್ಯ ಶರಭೋಜಿ ಗಾಯಕ್ವಾಡ್ ಬೆಂಬಲದೊಂದಿಗೆ ಬಿಜೆಪಿಯ ಸುಧಾ ಸೋಮನಾಥ 20 ಮತಗಳನ್ನು ಪಡೆದು ಆಯ್ಕೆಯಾದರು. 17 ಮತಗಳನ್ನು ಪಡೆದ ಹೀರಾಬಾಯಿ ಪರಾಭವಗೊಂಡರು.

    ತಿಂಗಳ ಒಳಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಅನರ್ಹ: ವಿಪ್ ಜಾರಿಗೊಳಿಸಿದರೂ ಬಿಜೆಪಿ ವಿರುದ್ಧ ಮತ ಚಲಾಯಿಸಿದ ಬಿಜೆಪಿಯ ಸುಧಾಸೋಮನಾಥ ಸದಸ್ಯತ್ವ ತಿಂಗಳೊಳಗೆ ಅನರ್ಹ ಗೊಳಿಸಲಾಗುತ್ತಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಲಿದೆ. ಅಧಿಕಾರ ಪಡೆಯಲು ಯತ್ನಿಸಿದ್ದು, ಕೊನೇ ಗಳಿಗೆಯಲ್ಲಿ ಬಿಜೆಪಿ ಸದಸ್ಯೆ ಕಾಂಗ್ರೆಸ್ ಬೆಂಬಲಿಸಿದ್ದಾರೆ. ವಾರ್ಡ್ ಮತದಾರರು ಬಿಜೆಪಿಗೆ ಜನಾದೇಶ ನೀಡಿದ್ದರು. ಪಕ್ಷದ ನಿಯಮ ಉಲ್ಲಂಸಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ದೂರು ನೀಡಲಾಗಿದ್ದು, ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

    ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನ ದೊರಕಿದ್ದು, ನಗರದ ಸ್ವಚ್ಛತೆಗಾಗಿ ಪ್ರಾಯಾಸ ಪಡುತ್ತೇನೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾರ್ಗದರ್ಶನ ಮತ್ತು ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಪಡೆಯಲು ಸಾಧ್ಯವಾಗಿದ್ದು, ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
    | ಮಾಲಾಶ್ರೀ ಸಂದೀಪ ನಗರಸಭೆ ನೂತನ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts