More

    ಸಮಾನತೆ, ಕಾಯಕ ತತ್ವದ ಬಸವಣ್ಣ ಕೊಡುಗೆ ಎಂದು ಬಣ್ಣಿಸಿದ ಶಾಸಕ ಪರಣ್ಣ ಮುನವಳ್ಳಿ

    ಗಂಗಾವತಿ: ಸಮಾನತೆ ಮತ್ತು ಕಾಯಕ ತತ್ವಗಳನ್ನು ಜಗತ್ತಿಗೆ ನೀಡಿದ ಬಸವಣ್ಣನವರ ವಚನಗಳು ಸಾರ್ವಕಾಲಿಕ ಮಾನ್ಯತೆ ಪಡೆದಿವೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಆನೆಗೊಂದಿ ರಸ್ತೆ ಬಸವೇಶ್ವರ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಬಸವ ದಳ ಭಾನುವಾರ ಆಯೋಜಿಸಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ಧ್ವಜಾರೋಹಣ ನೆರವೇರಿಸಿ, ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು. ಎಲ್ಲ ವರ್ಗದವರನ್ನೂ ಒಪ್ಪಿಕೊಳ್ಳುವ ಸಂದೇಶ ನೀಡಿದ ಬಸವೇಶ್ವರರು ಅಸಮಾನತೆ ತೊಲಗಿಸಿದವರು. ವಚನಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು ಎಂದರು.

    ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ,ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ, ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ್, ತಾಪಂ ಇಒ ಡಾ.ಮೋಹನ್, ರಾಷ್ಟ್ರೀಯ ಬಸವ ದಳ ಪದಾಧಿಕಾರಿಗಳಾದ ಕೆ.ಪಂಪಣ್ಣ, ಮಲ್ಲಿಕಾರ್ಜುನ ಹೊಸ್ಕೇರಾ, ಕೆ.ಬಸವರಾಜ, ವೀರೇಶ ರೆಡ್ಡಿ, ನಗರಸಭೆ ಮಾಜಿ ಸದಸ್ಯರಾದ ದೇವಪ್ಪ ಕಾಮದೊಡ್ಡಿ, ಜೋಗದ ಹನುಮಂತಪ್ಪ ನಾಯಕ, ಡಾ.ಶಿವಕುಮಾರ ಮಾಲಿ ಪಾಟೀಲ್, ಕ್ರುದ್ದೀನ್‌ಸಾಬ್ ಇಟಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts