More

    ಮಿನಿ ವಿಧಾನಸೌಧ ಆವರಣದಲ್ಲಿ ಶೌಚಗೃಹ ನಿರ್ಮಿಸಿ; ಶಾಸಕರಿಗೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಮನವಿ

    ಗಂಗಾವತಿ: ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಸೇರಿದಂತೆ ವಿವಿಧ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಶಾಸಕ ಪರಣ್ಣ ಮುನವಳ್ಳಿಗೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಭಾನುವಾರ ಮನವಿ ಸಲ್ಲಿಸಿದರು.

    ಮಿನಿ ವಿಧಾನಸೌಧದಲ್ಲಿ ಸಾಮಾಜಿಕ ಭದ್ರತೆ, ಉಪನೋಂದಣಿ, ಖಜಾನೆ ಮತ್ತು ಸರ್ವೇ ಇಲಾಖೆಗಳಿವೆ. ನಗರ ಮತ್ತು ಗ್ರಾಮೀಣ ಭಾಗದ ಜನರು ನಿತ್ಯ ಈ ಕಚೇರಿಗಳಿಗೆ ಕೆಲಸಗಳಿಗಾಗಿ ಬರುತ್ತಾರೆ. ಆದರೆ, ಸಾರ್ವಜನಿಕ ಶೌಚಗೃಹ ಇಲ್ಲದಿರುವುದರಿಂದ ಬಯಲೇ ಗತಿಯಾಗಿದೆ. ಕುಡಿವ ನೀರಿಗಾಗಿ ಹೋಟೆಲ್‌ಗಳಿಗೆ ಹೋಗಬೇಕಿದೆ. ಆವರಣದಲ್ಲಿ ರಸ್ತೆಯೂ ಸರಿಯಿಲ್ಲದಿರುವುದರಿಂದ ಅಂಗವಿಕಲರ, ವೃದ್ಧರ ಸಂಚಾರಕ್ಕೆ ಅಡ್ಡಿಯಾಗಿದೆ. ಸಿಬ್ಬಂದಿಗೂ ಶೌಚಗೃಹ ಇಲ್ಲದಿರುವುದರಿಂದ ವಸತಿಗೃಹಕ್ಕೆ ತೆರಳುತ್ತಿದ್ದಾರೆ ಎಂದು ಸಮಿತಿ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತಿಳಿಸಿದರು.

    ಮಿನಿ ವಿಧಾನಸೌಧ ನಗರದಿಂದ ದೂರದಲ್ಲಿರುವ ಕಾರಣಕ್ಕೆ ಅಲ್ಲಿರುವ ಕಚೇರಿಗಳನ್ನು ಹಳೇ ತಹಸಿಲ್ ಕಚೇರಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದು, ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಎಚ್.ಎನ್.ಹಂಚಿನಾಳ್, ಹರೀಶ್ ಚವ್ಹಾಣ, ರಗಡಪ್ಪ ಹೊಸಳ್ಳಿ, ಚಂದ್ರಶೇಖರ್ ನಿಸರ್ಗ, ಜಡಿಯಪ್ಪ ಹಂಚಿನಾಳ್, ದುರುಗೇಶ ಹೊಸಳ್ಳಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts