More

    ಸ್ವಾವಲಂಭಿ ಜೀವನಕ್ಕೆ ಸಹಕಾರ

    ಗಂಗಾವತಿ: ವಿಕಲಚೇತನರು ಮತ್ತು ಹಿರಿಯ ನಾಗರೀಕರಿಗೆ ಮೀಸಲಾದ ಯೋಜನೆಗಳನ್ನು ಸಮರ್ಪಕ ಅನುಷ್ಟಾನಗೊಳಿಸಲಾಗುತ್ತಿದ್ದು, ಸ್ವಾವಲಂಭಿ ಜೀವನಕ್ಕೆ ಸಹಕರಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

    ಇದನ್ನೂ ಓದಿರಿ:ಅಂಜನಾದ್ರಿ, ತಿರುಪತಿ ಸಂಪರ್ಕಕ್ಕೆ ಶೀಘ್ರ ಅವಕಾಶ, ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿಕೆ

    ನಗರದ ಶಾಸಕರ ಗೃಹ ಕಚೇರಿಯಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಕಲಚೇತನರಿಗೆ ನಗರ ಮತ್ತು ಗ್ರಾಮೀಣ ಭಾಗದ ವಿವಿಧ ಇಲಾಖೆಗಳಲ್ಲಿ ಮೀಸಲಾದ ಅನುದಾನ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದ್ದು, ಮೂಲ ಸೌಕರ್ಯ ಒದಗಿಸಲಾಗುವುದು. ಇಲಾಖೆ ಯೋಜನೆ ಸದ್ಭಳಕೆ ಮೂಲಕ ಆರ್ಥಿಕ ಸುಧಾರಣೆಯತ್ತ ಗಮನಹರಿಸುವಂತೆ ಸಲಹೆ ನೀಡಿದರು.

    ಕ್ಷೇತ್ರದ ಹಾಸಗಲ್, ಆನೆಗೊಂದಿ, ಸಂಗಾಪುರ, ಹಣವಾಳ ಮತ್ತು ಹೊಸ ಹಿರೇಬೆಣಕಲ್ ವಿಕಲಚೇತನರಿಗೆ ತ್ರಿಚಕ್ರವಾಹನಗಳನ್ನು ವಿತರಿಸಲಾಯಿತು. ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ಮುಖಂಡರಾದ ಲಿಂಗನಗೌಡ ಹೇರೂರು, ವೀರೇಶ ಬಲ್ಕುಂದಿ, ಮಹಾಂತೇಶ, ಜೀಲಾನಿ ಪಾಶಾ ಖಾತ್ರಿ, ಅಂಗವಿಕಲರ ಒಕ್ಕೂಟದ ಪದಾಧಿಕಾರಿಗಳಾದ ಮಂಜುನಾಥ ಹೊಸ್ಕೇರಾ, ಬಸವರಾಜ ಗೋನಾಳ್, ಯಮನೂರಪ್ಪ ಪುಂಡಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts