More

    ಕರೊನಾ ಸೇನಾನಿಗಳ ಸೂಚನೆ ಪಾಲಿಸಿ; ಶಾಸಕ ಬಸವರಾಜ ದಢೇಸೂಗೂರು ಸಲಹೆ

    ಆಹಾರ ಧಾನ್ಯಗಳ ಕಿಟ್ ವಿತರಣೆ

    ಗಂಗಾವತಿ: ತಾಲೂಕಿನ ಢಣಾಪುರದಲ್ಲಿ ಸೀಲ್‌ಡೌನ್ ಏರಿಯಾದಲ್ಲಿ ಕಾರ್ಮಿಕ ಇಲಾಖೆ ನೆರವಿನೊಂದಿಗೆ 500ಕ್ಕೂ ಹೆಚ್ಚು ಲಾನುಭವಿಗಳಿಗೆ ಆಹಾರ ಧಾನ್ಯಗಳ ಕಿಟ್‌ನ್ನು ಶಾಸಕ ಬಸವರಾಜ ದಢೇಸೂಗೂರು ಭಾನುವಾರ ವಿತರಿಸಿದರು.

    ನಂತರ ಮಾತನಾಡಿ, ಸೀಲ್ ಡೌನ್ ಏರಿಯಾದಲ್ಲಿ ಮುಂಜಾಗ್ರತೆ ಕ್ರಮ ಕಡ್ಡಾಯ ಪಾಲಿಸಬೇಕಿದ್ದು, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಬೇಕಿದೆ. ಕರೊನಾ ಸೇನಾನಿಗಳ ಸೂಚನೆ ಗೌರವಿಸಬೇಕಿದ್ದು, ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

    ಆರೋಗ್ಯ ಸಿಬ್ಬಂದಿ ಪೇಚಿಗೆ: ಕಿಟ್ ವಿತರಣೆ ಸಂದರ್ಭದಲ್ಲಿ ಲಾನುಭವಿಗಳು ಮತ್ತು ಬೆಂಬಲಿಗರು ದೈಹಿಕ ಅಂತರ ಮರೆತಿದ್ದು, ಆರೋಗ್ಯ ಸಿಬ್ಬಂದಿ ಪೇಚಿಗೆ ಸಿಲುಕಿದರು. ಮುಖಂಡರಾದ ಚಂದ್ರಶೇಖರ್ ಮುಸಾಲಿ, ನಾಗರಾಜ ಬಿಲ್ಗಾರ್, ಪಂಪನಗೌಡ ಜಂತಕಲ್, ಶರಣೇಗೌಡ ಸೇರಿ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರಿದ್ದರು.

    ಮಾಸ್ಕ್ ವಿತರಣೆ: ಸೀಲ್ ಡೌನ್ ಆಗಿರುವ ನಗರದ ಗಾಂಧಿ ನಗರ ವ್ಯಾಪ್ತಿಯ ವಿವಿಧ ಕಾಲನಿಗಳಲ್ಲಿ ಜೆಡಿಎಸ್ ಯುವ ಘಟಕದಿಂದ ನಿವಾಸಿಗಳಿಗೆ 2000 ಮಾಸ್ಕ್‌ಗಳನ್ನು ವಿತರಿಸಲಾಯಿತು. ಕರೊನಾ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆ ವಡೆಯರ ಓಣಿ, ಅಗಸರ ಓಣಿ, ಗಾಂಧಿನಗರ, ಉಪ್ಪಾರ ಓಣಿ ಸಂಪರ್ಕದ ರಸ್ತೆ ಸೀಲ್‌ಡೌನ್ ಮಾಡಲಾಗಿದೆ. ಮುಂಜಾಗ್ರತೆ ಕ್ರಮ ಅನುಸರಿಸುವಂತೆ ಕಾರ್ಯಕರ್ತರು ನಿವಾಸಿಗಳಿಗೆ ಮನವಿ ಮಾಡಿದರು. ಮುಖಂಡರಾದ ವೀರಭದ್ರಗಿಣಿಮೋತಿ, ಮಹಾಲಿಂಗ, ವೀರೇಶ, ಪಂಪಾಪತಿ, ಹನುಮೇಶ, ಮಲ್ಲಿಕಾರ್ಜುನ, ಹುಲಿಗೇಶ, ಶಿವಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts