More

    ದಾನಪ್ಪ ಕೊಲೆ ಅಪರಾಧಿಗಳನ್ನು ಬಂಧಿಸಿ ; ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ

    ಗಂಗಾವತಿ: ದಲಿತ ಯುವಕ ದಾನಪ್ಪ ಕೊಲೆ ಅಪರಾಧಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ನಗರದ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ಜಿಲ್ಲೆಯಲ್ಲಿ ಅಸ್ಪಶ್ಯತೆ ಜೀವಂತವಾಗಿದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ಹಲ್ಲೆ ಪ್ರಕರಣ ಹೆಚ್ಚುತ್ತಿವೆ. ಕಾರಟಗಿ ತಾಲೂಕಿನ ಬರಗೂರು ಗ್ರಾಮದ ದಾನಪ್ಪ ಹತ್ಯೆಯಾಗಿ ಒಂದು ತಿಂಗಳಾಗಿದ್ದರೂ ಪ್ರಮುಖ ಅಪರಾಧಿಗಳನ್ನು ಬಂಧಿಸಿಲ್ಲ. ಪ್ರಕರಣ ಮುಚ್ಚಿಹಾಕಲು ಪೊಲೀಸರು ಹುನ್ನಾರ ನಡೆಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ. ದಾನಪ್ಪನ ಕುಟುಂಬಕ್ಕೆ 20 ಲಕ್ಷ ರೂ. ಮತ್ತು 2 ಎಕರೆ ಕೃಷಿ ಭೂಮಿ ನೀಡಬೇಕು. ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಸಮಿತಿ ತಾಲೂಕು ಅಧ್ಯಕ್ಷ ಕೆ.ಹುಸೇನಪ್ಪ ಒತ್ತಾಯಿಸಿದರು.

    ಸಿಐಟಿಯು, ಪ್ರಾಂತ ರೈತ ಸಂಘ,ಎಸ್‌ಎ್ಐ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪಗೆ ಮನವಿ ಸಲ್ಲಿಸಿದರು. ನಿರುಪಾದಿ ಬೆಣಕಲ್, ಎಂ.ಬಸವರಾಜ, ಜಿ.ನಾಗರಾಜ್, ಮರಿನಾಗಪ್ಪ ಡಗ್ಗಿ, ಮಂಜುನಾಥ ಡಗ್ಗಿ, ಶ್ರೀನಿವಾಸ ಹೊಸಳ್ಳಿ, ಹುಲಿಗೆಮ್ಮ, ಲಕ್ಷ್ಮೀದೇವಿ, ಬಾಳಪ್ಪ ಹುಲಿಹೈದರ್, ಕೃಷ್ಣಪ್ಪ ನಾಯಕ, ಗ್ಯಾನೇಶ ಕಡಗದ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts