More

    ಸಾಹಿತ್ಯ ರಚನೆ ಸುಲಭದ ಮಾತಲ್ಲ; ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಅಭಿಪ್ರಾಯ


    ಗಂಗಾವತಿ: ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಗುಣ ಭತ್ತದ ನಾಡಿನ ಜನರಲ್ಲಿದೆ. ಆದರೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿಲ್ಲ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ, ಬಿ.ಪ್ರಾಣೇಶ ಹೇಳಿದರು.

    ನಗರದ ಕಸಾಪ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಓದುಗರಿಲ್ಲದಿದ್ದರೂ ಸಾಹಿತ್ಯ ರಚಿಸುವ ಲೇಖಕರಿಗೇನು ಕೊರತೆಯಿಲ್ಲ. ಸಾಹಿತ್ಯ ರಚಿಸುವುದು ಸುಲಭದ ಮಾತಲ್ಲ, ಕೃತಿಗಳನ್ನು ಪ್ರಕಟಿಸುವುದು ಲೇಖಕರಿಗೆ ಹೆರಿಗೆ ನೋವಿದ್ದಂತೆ. ಓದುವ ಸಾಮರ್ಥ್ಯ ಬೆಳೆಸಿಕೊಂಡಾಗ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು.

    ಡಾ.ವೀರೇಶ್ ಜಾನೆಕಲ್‌ರ ಮಹಿಳೆ ಮತ್ತು ಕೌಶಲ್ಯ ದುಡಿಮೆ, ಮಹಿಳೆ ಚಿಂತನೆಯ ಹುಡುಕಾಟ, ಕಲ್ಯಾಣ ಕರ್ನಾಟಕ ಪ್ರದೇಶ ಲಿಂಗ ಅಂತರಗಳು (ಎಸ್‌ಸಿ ಮತ್ತು ಎಸ್‌ಟಿ ಪಂಗಡ ಸಮುದಾಯ ಅನುಲಕ್ಷಿಸಿ) ಮತ್ತು ಮಲ್ಲೇಶ ಅಂಗಡಿ ರಚಿತ ನೀರು ಕರಗಿದ ಮರುದಿನ, ಶರಣಪ್ಪ ತಳ್ಳಿ ಕುಪ್ಪಿಗುಡ್ಡರ ನಂಜು ನುಂಗಿದ ನಗು ಪುಸ್ತಕ ಬಿಡುಗಡೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts