More

    ಶೈಕ್ಷಣಿಕ ಸೌಲಭ್ಯ ಸದ್ಬಳಕೆ ಉನ್ನತ ಸಾಧನೆಗೆ ದಾರಿ

    ಬಿಇಒ ಸೋಮಶೇಖರಗೌಡ ತಿಪ್ಪನಾಳ್ ಅಭಿಮತ

    ಗಂಗಾವತಿ : ಪ್ರಸ್ತುತ ದಿನಗಳಲ್ಲಿ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಶೈಕ್ಷಣಿಕ ಸೌಲಭ್ಯಗಳ ಸದ್ಬಳಕೆ ಮೂಲಕ ಉನ್ನತ ಸಾಧನೆ ಮಾಡುವಂತೆ ಬಿಇಒ ಸೋಮಶೇಖರಗೌಡ ತಿಪ್ಪನಾಳ್ ಹೇಳಿದರು.

    ನಗರದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಚೇರಿಯಲ್ಲಿ ಟ್ರಸ್ಟ್‌ನಿಂದ ಬುಧವಾರ ಆಯೋಜಿಸಿದ್ದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶಿಕ್ಷಣ ಮತ್ತು ಉನ್ನತ ಹುದ್ದೆ ಸಾಧನೆಗೆ ಬಡತನ ಮತ್ತು ಜಾತಿ ಮುಖ್ಯವಲ್ಲ. ಓದುವ ಮನಸ್ಸಿನಿದ್ದರೆ ಅವಕಾಶಗಳ ಮೂಲ ನಿರೀಕ್ಷಿತ ಗುರಿ ತಲುಪಲು ಸಾಧ್ಯ. ಶಿಕ್ಷಣ, ಸಂವಹನ, ಕೌಶಲ್ಯತೆ ರೂಢಿಸಿಕೊಂಡವರಿಗೆ ಸಾಧನೆ ದಾರಿ ಸಮೀಪ. ಧಾರ್ಮಿಕದೊಂದಿಗೆ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೂ ಯೋಜನೆ ಶ್ರಮಿಸುತ್ತಿರುವುದು ಪ್ರಶಂಸನೀಯ. ಶಿಕ್ಷಣ ಯೋಜನೆ ಸದ್ಬಳಕೆ ಮೂಲಕ ಭವಿಷ್ಯದ ಉತ್ತಮ ಪ್ರಜೆಗಳಾಗುವಂತೆ ಸಲಹೆ ನೀಡಿದರು.

    ಹಿರಿಯ ಪತ್ರಕರ್ತ ಚಂದ್ರಶೇಖರ್ ಶೃಂಗೇರಿ ಮಾತನಾಡಿ, ಮೈಕ್ರೋ ೈನಾನ್ಸ್ ಮೂಲಕ ಅಶಕ್ತ ಕುಟುಂಬಗಳಿಗೆ ಟ್ರಸ್ಟ್ ದಾರಿ ದೀಪವಾಗಿದ್ದು, ದೂರದೃಷ್ಟಿ ಯೋಜನೆಗಳು ಸದ್ಬಳಕೆಯಾಗಲಿವೆ ಎಂದರು. ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜಾ ಪ್ರಾಸ್ತಾವಿಕ ಮಾತನಾಡಿ, ತಾಲೂಕಿನಲ್ಲಿ 3 ಸಾವಿರ ಸ್ವಸಹಾಯ ಗುಂಪುಗಳಿದ್ದು, 25 ಸಾವಿರ ಸದಸ್ಯರಿದ್ದಾರೆ. 210 ಸ್ವಯಂಸೇವಕರು ಶೈಕ್ಷಣಿಕ, ಆರ್ಥಿಕ ಮತ್ತು ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ 81 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡಲಾಯಿತು. ಜನಜಾಗೃತಿ ವೇದಿಕೆ ಜಿಲ್ಲಾ ನಿರ್ದೇಶಕ ನೀಲಕಂಠಪ್ಪ ನಾಗಶೆಟ್ಟಿ, ಶಿಕ್ಷಣ ಸಂಯೋಜಕ ರಾಘವೇಂದ್ರ, ಮೇಲ್ವಿಚಾರಕಿ ಶಾರದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts