More

    ಗಂಗಾರತಿ ದೀಪೋತ್ಸವ ಕಾರ್ಯಕ್ರಮ

    ರಾಮದುರ್ಗ: ಮಕರ ರಾಶಿಗೆ ಗುರು ಪ್ರವೇಶದ ಹಿನ್ನೆಲೆಯಲ್ಲಿ 36 ವರ್ಷಕ್ಕೊಮ್ಮೆ ಬರುವ ಗಂಗಾರತಿ ಕಾರ್ಯಕ್ರಮವನ್ನು ತಾಲೂಕು ಹಾಗೂ ಪಟ್ಟಣದ ಜನತೆ ವಿಜೃಂಭಣೆಯಿಂದ ದೀಪಾಲಂಕಾರದೊಂದಿಗೆ ಆಚರಣೆ ಮಾಡುತ್ತಿರುವುದು ಹಿಂದು ಧರ್ಮ ಸಂಸ್ಕೃತಿಯ ಸಂಕೇತವಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

    ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಹಳೇ ಸೇತುವೆ ಸಮೀಪದ ಮಲಪ್ರಭೆ ನದಿಗೆ ಮಕರ ರಾಶಿಗೆ ಗುರು ಪ್ರವೇಶದ ಹಿನ್ನಲೆಯಲ್ಲಿ ಸ್ಥಳೀಯ ಗಂಗಾ ಆರತಿ ಉತ್ಸವ ಸಮಿತಿ ನೇತೃತ್ವದಲ್ಲಿ ಏರ್ಪಡಿಸಿದ್ದ ಗಂಗಾರತಿ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮದುರ್ಗದ ಜನತೆ ಪಕ್ಷಾತೀತವಾಗಿ, ಒಗ್ಗಟ್ಟಿನಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಖಂಡ ಹಿಂದು ಧರ್ಮ, ಸಂಸ್ಕೃತಿಯ ಪರಂಪರೆಯನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಜಯೇಂದ್ರ ಜೋಶಿ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ, ಪುರಸಭೆ ಅಧ್ಯಕ್ಷ ಶಂಕ್ರೆಪ್ಪ ಬೆನ್ನೂರ, ಉಪಾಧ್ಯಕ್ಷ ರಾಘವೇಂದ್ರ ದೊಡಮನಿ, ಬಿಜೆಪಿ ಮುಖಂಡ ಡಾ.ಕೆ.ವಿ.ಪಾಟೀಲ, ಪುರಸಭೆ ಸದಸ್ಯ ನಾಗರಾಜ ಕಟ್ಟಿಮನಿ, ಗಂಗಾಧರ ಭೋಸ್ಲೆ, ಶ್ರೀನಿವಾಸ ಕುರುಡಗಿ, ವಿಜಯ ನಾಯಕ, ಚಂದ್ರಕಾಂತ ಹೊಸಮನಿ, ವಿಜಯ ಇದ್ದರು. ಮಹಿಳಾ ಭಜನಾ ಸಂಘಗಳಿಂದ ಭಜನೆ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts