More

    ಸಿರಿಧಾನ್ಯ ಬರಗಾಲದ ಬೆಳೆ

    ಗಂಗಾವತಿ: ಸಿರಿಧಾನ್ಯಗಳು ಬರಗಾಲದ ಬೆಳೆಯಾಗಿದ್ದು, ಸಾವಯುವ ಕೃಷಿ ಪದ್ದತಿಯಲ್ಲಿ ಸುಲವಾಗಿ ಬೆಳೆಯಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಹೇಳಿದರು.

    ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಸೀಶಕ್ತಿ ಗುಂಪಿನ ಸದಸ್ಯರಿಗೆ ಬುಧವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ರೈತರಿಗೆ ಇಳುವರಿ ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಿರಿಧಾನ್ಯಗಳನ್ನು ಬೆಳೆಯಬೇಕಿದ್ದು, ಮಾರುಕಟ್ಟೆಯಲ್ಲೂ ಉತ್ತಮ ಸ್ಪಂದನೆಯಿದೆ. ಕಿರುಧಾನ್ಯಗಳ ಬೆಲೆ ಕಡಿಮೆಯಿದ್ದು, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಅವಶ್ಯಕತೆಯಿದೆ. ಸ್ವಸಹಾಯ ಗುಂಪುಗಳು ಸಿರಿಧಾನ್ಯ ಆಧಾರಿತ ಆಹಾರ ಪದಾರ್ಥಗಳ ಬಳಕೆ ಮತ್ತು ಉತ್ಪಾದನೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

    ಕಿರುಧಾನ್ಯಗಳ ಪೌಷ್ಟಿಕ ಮಹತ್ವ, ಮೌಲ್ಯವರ್ಧನೆ ಕುರಿತು ತಜ್ಞೆ ಡಾ.ಆರ್. ಜ್ಯೋತಿ, ಬೀಜೋತ್ಪಾದನೆ ಕುರಿತು ತಜ್ಞೆ ಜೆ.ರಾಧಾ, ಕ್ಷೇತ್ರ ನಿರ್ವಹಣೆ ಕುರಿತು ಹಿರಿಯತಾಂತ್ರಿಕ ಅಧಿಕಾರಿ ಜಿ.ನಾರಪ್ಪ ಮತ್ತು ಕಿರುಧಾನ್ಯಗಳ ಸಾಂಪ್ರದಾಯಿಕ ಆಹಾರ ಕುರಿತು ಸವಿತಾ ಸ್ವಸಹಾಯ ಗುಂಪಿನ ಸದಸ್ಯರಾದ ರಾಧಾ ಮಾಹಿತಿ ನೀಡಿದರು.

    ನಂತರ ನಡೆದ ಪಾಕ ಸ್ಪರ್ಧೆಯಲ್ಲಿ ಹೊಸ್ಕೇರಾ ಕ್ಯಾಂಪ್ ರಾಧಾ ರಾಂಬಾಬು (ಪ್ರಥಮ), ಚಿಕ್ಕಜಂತಕಲ್ ಗೀತಾಶ್ರೀವೀರೇಶ್ (ದ್ವೀತಿಯ), ಯರಡೋಣಾದ ಸವಿತಾ ಮಲ್ಲಿಕಾರ್ಜುನ (ತೃತೀಯ), ಬೂದಗುಂಪಾದ ವೀರಮ್ಮ ಪಂಪಾಪತಿ, ಮಲ್ಲಾಪುರದ ಪವಿತ್ರಾ ಶಿವಕುಮಾರ (ಸಮಾಧಾನಕರ) ಬಹುಮಾನ ಪಡೆದುಕೊಂಡರು. ಸ್ಪರ್ಧೆಯಲ್ಲಿ ಜೋಳದ ಕಡುಬು, ಮಾಲ್ಟ್, ಮಿಶ್ರ ಲಡ್ಡು, ನವಣಕ್ಕಿ ಪಲಾವ್, ನವಣಕ್ಕಿ ಪಾಯಸ, ರಾಗಿ ಮಾಲ್ಟ್, ದೋಸೆ, ಬರ್ಫಿ, ಹಲ್ವಾ ಖಾದ್ಯಗಳು ಗಮನಳೆದವು. ವಿವಿಧ ಗ್ರಾಮಗಳ ಸೀಶಕ್ತಿ ಗುಂಪಿನ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts