More

    ಬಸ್​ ನಿಲ್ದಾಣದ ಜಾಗಕ್ಕಾಗಿ ಮಾರಾಮಾರಿ; ಕಲ್ಲು ಬಡಿಗೆ ಹಿಡಿದು ಪರಸ್ಪರ ಹೊಡೆದಾಡಿದ ಜನರು!

    ಹಾವೇರಿ: ಎಲ್ಲರೂ ಗ್ರಾಮದ, ಹಾಗೂ ಒಂದ ಸಮುದಾಯದ ಜನರಾಗಿದ್ದರೂ ಬಸ್ ನಿಲ್ದಾಣದ ಜಾಗದ ವಿಚಾರಕ್ಕೆ ಎರಡು ಗುಂಪುಗಳು ನಡುವೆ ಮಾರಾಮಾರಿ ನಡೆದಿದೆ. ಓರ್ವ ವ್ಯಕ್ತಿಗೆ ಚಾಕು ಇರಿತವಾಗಿದ್ದು, ಎಂಟುಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಜನರು ಬಡಿಗೆ, ಚಾಕು, ಕಲ್ಲಿನಿಂದ ಹೊಡೆಯುತ್ತಿರೋ ದೃಶ್ಯ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ತಡಸ ಗ್ರಾಮದ ಕಮಲಾನಗರದ ತಾಂಡಾದಲ್ಲಿ ಕಂಡುಬಂದಿದೆ. ಕಮಲಾನಗರದ ತಾಂಡಾದಲ್ಲಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಬಸ್ ನಿಲ್ದಾಣ ಕಾಮಾಗಾರಿ ನಡೆಸಲು ಜಾಗವನ್ನು ಗುರುತಿಸಲಾಗಿದ್ದು ಒಂದು ಗುಂಪು ಬಸ್ ನಿಲ್ದಾಣ ಮಾಡಬೇಕು ಎಂದು, ಇನ್ನೊಂದು ಗುಂಪು ಅಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬಾರದು ಎಂದು ಪಟ್ಟು ಹಿಡಿದಿದ್ದವು.

    ಕಡೆಗೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು ಈ ಸಂದರ್ಭ ಚಾಕು, ಕಲ್ಲು ಬಡಿಗೆ ಹೀಗೆ ಸಿಕ್ಕ ಸಿಕ್ಕ ಆಯುಧವನ್ನು ಹಿಡಿದುಕೊಂಡು ಪರಸ್ಪರ ಬಡೆದಾಡಿಕೊಂಡಿದ್ದಾರೆ. ಗಲಾಟೆಯ ವೇಳೆ ಓರ್ವ ಯುವಕನಿಂದ ಹಲವರಿಗೆ ಚಾಕು ಇರಿತವಾಗಿದೆ. ಕಲ್ಲಿನಿಂದ ಹೊಡೆದಾಡಿಕೊಂಡು ಕಲ್ಲು ಬಿಸಾಡುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಓರ್ವನ ಎದೆಗೆ ಚಾಕು ಇರಿತ ಆಗಿದ್ದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಒಟ್ಟು ಎಂಟು ಜನರಿಗೆ ಗಾಯಗಳಾಗಿವೆ. ಹಲ್ಲೆಗೆ ಒಳಗಾದ ವ್ಯಕ್ತಿಗಳನ್ನ ರವಿ, ಶಂಕರ್ ,ರಾಜು, ಮಹೇಶ್, ಲಾಲಪ್ಪ, ಹನುಮಂತ ಹಾಗೂ ಅಕ್ಷಯ ಲಮಾಣಿ ಎಂದು ಗುರುತಿಸಲಾಗಿದೆ. ಇದೀಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

    ಪರಸ್ಪರ ನಡೆದ ಗಲಾಟೆಯಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಕೈ ಬೆರಳು ಕಟ್ ಆಗಿದ್ದು ಅನೇಕರ ತಲೆಗೆ ಗಂಭೀರ ಗಾಯಗಳಾಗಿವೆ. ಚಾಕು ಇರಿತಕ್ಕೆ ಒಳಗಾದ ಯುವಕ ಹಾಗೂ ಗಾಯಾಳುಗಳು ಹುಬ್ಬಳ್ಳಿಯ ಕೀಮ್ಸ್ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸುರೇಶ್ ಲಮಾಣಿ ,ಹಾಗೂ ಆತನ 7ಕ್ಕೂ ಅಧಿಕ ಸಹಚರರು ಸೇರಿ ರವಿ ಹಾಗೂ ಶಂಕರ್ ಸೇರಿದಂತೆ 8ಕ್ಕೂ ಅಧಿಕ ಜನರ ಮೇಲೆ ಇರಿದು ಹಲ್ಲೆ‌ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.‌ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಒಟ್ಟಾರೆಯಾಗೆ ಒಂದು ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವನಿಗೆ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಒಟ್ಟು ೮ ಕ್ಕೂ ಅಧಿಕ ಜನರನ್ನು ಮುಂಡಗೋಡ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts