More

    ನಗರದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ: ಹಿಂದಿನ ವೈಭವ ಮರುಕಳಿಸಲು ಆಯೋಜನೆ

    ಮಂಡ್ಯ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಗರದಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷರೂ ಆದ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ದೊಡ್ಡಚಾರ್ ತಿಳಿಸಿದರು.
    ಗಣೇಶ ವಿಸರ್ಜನೆಯನ್ನು ಎಲ್ಲೆಲ್ಲೋ ಮಾಡಲಾಗುತ್ತಿತ್ತು. ಹಿಂದಿನ ವೈಭವವನ್ನು ಮರಕಳಿಸುವ ಉದ್ದೇಶದಿಂದ ಸಮಿತಿ ವತಿಯಿಂದ ಮಂಡ್ಯ ನಗರದಲ್ಲಿ ಪ್ರತಿಷ್ಠಾಪಿಸಿ ಐದು ದಿನಗಳವರೆಗೆ ಪೂಜಾ ಕಾರ್ಯ ಯಶಸ್ವಿಯಾಗಿ ಪೂರೈಸಿದವರೆಲ್ಲರೂ ಒಟ್ಟಿಗೆ ಸೇರಿ ವಿಸರ್ಜನೆ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈಗಾಗಲೇ 25ಕ್ಕೂ ಹೆಚ್ಚು ಸಮಿತಿಗಳು ನೋಂದಣಿ ಮಾಡಿಕೊಂಡಿದ್ದಾರೆ. 100 ಗಣೇಶಗಳನ್ನು ಒಟ್ಟಿಗೇ ವಿಸರ್ಜನೆ ಮಾಡುವ ಉದ್ದೇಶ ಹೊಂದಲಾಗಿದೆ. ಸೆ.4ರಂದು ಮಧ್ಯಾಹ್ನ 1.30ಕ್ಕೆ ನಗರ ಸರ್‌ಎಂವಿ ಕ್ರೀಡಾಂಗಣಗೆ ಗಣಪತಿ ವಿಗ್ರಹವನ್ನು ತರಬೇಕು. ಬಳಿಕ ಅಲ್ಲಿಂದ ಆರ್.ಪಿ ರಸ್ತೆ, ವಿ.ವಿ ರಸ್ತೆ, ಮಹಾವೀರ ವೃತ್ತ, ಜೈನರಬೀದಿ, ಕಾಮನ ವೃತ್ತ, ಹಳೇ ಎಂ.ಸಿ ರಸ್ತೆ ಮಾರ್ಗವಾಗಿ ಕೋಣನಹಳ್ಳಿ ಕೆರೆ ಬಳಿಗೆ ತೆರಳಿ ಸಾಮೂಹಿಕ ಗಣೇಶ ವಿಸರ್ಜನೆ ಮಾಡಲಾಗುವುದು ಎಂದು ವಿವರಿಸಿದರು.
    ಗಣೇಶ ಮೂರ್ತಿಗಳನ್ನು ಜಾನಪದ ಕಲಾತಂಡಗಳೊಂದಿಗೆ ಅಲಂಕೃತ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ಜತೆಗೆ ಪ್ರತಿಷ್ಠಾಪನಾ ಸಮಿತಿಯವರೂ ಸಹ ಜಾನಪದ ಕಲಾ ತಂಡಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲು ಅವಕಾಶ ನೀಡಲಾಗುವುದು. ಅಂದು ಎಲ್ಲರೂ ವಿಸರ್ಜನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು, ಗಣೇಶ ಮೆರವಣಿಗೆಗೆ ಅಗತ್ಯವಾದ ಟ್ರಾೃಕ್ಟರ್ ಸೌಲಭ್ಯ ಇಲ್ಲದಿದ್ದಲ್ಲಿ ನಮ್ಮ ಸಮಿತಿ ವತಿಯಿಂದಲೇ ಮಾಡಲಾಗುವುದು. ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪತಿಗಳನ್ನು ಮಾತ್ರ ವಿಸರ್ಜನೆ ಮಾಡಲಾಗುವುದು. ಪ್ರತಿಷ್ಠಾಪನೆಗೆ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗೆ ಸಮಸ್ಯೆಯಾಗಿದ್ದಲ್ಲಿ ನಮ್ಮನ್ನು ಸಂಪರ್ಕಿಸಿದರೆ ನಾವು ಅನುಮತಿಯನ್ನೂ ಕೊಡಿಸಲಾಗುವುದು ಎಂದು ಹೇಳಿದರು. ನಗರಸಭಾ ಸದಸ್ಯ ಎಂ.ಪಿ.ಅರುಣ್‌ಕುಮಾರ್, ಸಮಿತಿಯ ನೃತಪತುಂಗ, ಸರ್ವೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts