More

    ಕಣ್ಮನ ಸೆಳೆಯುವ ಕರಕುಶಲ ವಸ್ತುಗಳ ಗಾಂಧಿ ಶಿಲ್ಪ ಬಜಾರ್ ಮೇಳಕ್ಕೆ ಚಾಲನೆ; ಸಾರ್ವಜನಿಕರಿಗೆ ಉಚಿತ ಪ್ರವೇಶ

    ಬೆಂಗಳೂರು: ಜವಳಿ ಸಚಿವಾಲಯ ಸಹಯೋಗದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಜಯನಗರ 8ನೇ ಹಂತದ ರಾಜಾಲಕ್ಷ್ಮೀ ಕಲ್ಯಾಣ ಮಂದಿರದಲ್ಲಿ ಆಯೋಜಿಸಿರುವ ಗಾಂಧಿ ಶಿಲ್ಪ ಬಜಾರ್ ಮೇಳಕ್ಕೆ ಗುರುವಾರ (ಮಾ.18) ಚಾಲನೆ ಸಿಕ್ಕಿದೆ. ಮಾ.27ರವರೆಗೆ ನಡೆಯಲಿರುವ ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

    ದೇಶಾದ್ಯಂತ ಕುಶಲಕರ್ಮಿಗಳಿಗೆ ಉತ್ತೇಜನ ಹಾಗೂ ನೇರ ಮಾರುಕಟ್ಟೆ ಒದಗಿಸುವ ಸಲುವಾಗಿ ಈ ಮೇಳ ಆಯೋಜಿಸಲಾಗಿದೆ. ಇದರಲ್ಲಿ ಶಿಲ್ಪ ಪ್ರಶಸ್ತಿ ಪುರಸ್ಕೃತರು ಸೇರಿ 100 ಕುಶಲಕರ್ಮಿಗಳು ಇದ್ದಾರೆ. ವರ್ಣರಂಜಿತ ಕರಕುಶಲ ವಸ್ತುಗಳಾದ ಕಲ್ಲಿನ ಕೆತ್ತನೆಗಳು, ತಾಳೆ ಎಲೆಗಳ ಕೆತ್ತನೆ, ಒರಿಸ್ಸಾ ಮತ್ತು ನವಲಗುಂದ ಜಮಖಾನ, ಮುಂಡಗೋಡಿನ ರತ್ನಗಂಬಳಿ, ಬುಡಕಟ್ಟು ಜ್ಯುವೆಲ್ಲರಿ, ಅರಗು ಬಣ್ಣದ ಕಲಾಕೃತಿಗಳು, ಬಂಬು ಮತ್ತು ಬಿದರಿನ ಕಲಾಕೃತಿಗಳು ಇಲ್ಲಿವೆ.

    ಮಾತ್ರವಲ್ಲ ರಾಜಸ್ಥಾನದ ಪೇಪರ್ ಮ್ಯಶ್, ಕಸೂತಿ ಶಾಲುಗಳು, ಜಮ್ಮು ಮತ್ತು ಕಾಶ್ಮೀರದ ಕರಕುಶಲ ವಸ್ತುಗಳು ಹಾಗೂ ಆಭರಣಗಳು, ಕ್ರೋಜೆಟ್ ಲೇಸ್, ಜೋಳ ಕಂಚು, ಕಲ್ಲಿನ ಕೆತ್ತನೆಗಳು, ಮರದ ಕೆತ್ತನೆಗಳು, ತಮಿಳುನಾಡಿನ ಗ್ರಾಸ್ ಮ್ಯಾಟ್ಸ್, ಕೇರಳದ ಫೈಬರ್ ಆಧಾರಿತ ವಸ್ತುಗಳು, ಜರಿ, ಚಂದೇರಿ ಸೀರೆಗಳು, ಪುಲ್ಕಾರಿ ಎಂಬ್ರಾಯಡರಿ, ಮದುಬನಿ ವರ್ಣಚಿತ್ರಗಳು ಸೇರಿ 50ಕ್ಕೂ ವಿವಿಧ ಬಗೆಯ ಕರಕುಶಲ ವಸ್ತುಗಳು ಈ ಮೇಳದಲ್ಲಿದ್ದು, ನೋಡುಗರ ಕಣ್ಮನ ಸೆಳೆಯುವಂತಿವೆ.

    ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ

    ‘ನಿನ್ನ ಮಾತನ್ನು ಕೇಳಿಯೇ ನಾನು ಈ ಪರಿಸ್ಥಿತಿಗೆ ಬಂದಿದ್ದು’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ? ಯಾರ ಬಗ್ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts