More

    ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ

    ಗಂಗಾವತಿ: ಮಳೆ ಮತ್ತು ಗಾಳಿಯಿಂದ ನೆಲಕಚ್ಚಿದ ಭತ್ತದ ಗದ್ದೆಗಳಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.

    ಮಳೆ ಮತ್ತು ಗಾಳಿಯಿಂದ ನೆಲಕಚ್ಚಿದ ಭತ್ತ

    ತಾಲೂಕಿನ ಕೇಸರಹಟ್ಟಿ, ಹೇರೂರು ಭಾಗದಲ್ಲಿ ಸಂಚರಿಸಿದ ತಂಡ, ಹಾನಿಗೊಳಗಾದ ಭತ್ತದ ಬೆಳೆ ವೀಕ್ಷಿಸಿದರು. ರೈತರಿಂದ ಮಾಹಿತಿ ಪಡೆದುಕೊಂಡಿತಲ್ಲದೆ ಇಳುವರಿ ಉಳಿಸಿಕೊಳ್ಳಲು ಕೈಗೊಳ್ಳಬೇಕಿರುವ ಕ್ರಮಗಳು ಮತ್ತು ಪರಿಹಾರ ಕುರಿತು ಕಂದಾಯ ಸಿಬ್ಬಂದಿಯೊಂದಿಗೆ ಚರ್ಚಿಸಿದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಕಂದಾಯ ಮತ್ತು ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದ್ದು, ಸರ್ಕಾರದ ಗಮನಕ್ಕೂ ತರಲಾಗುವುದು. ಎರಡನೇ ಬೆಳೆಗೆ ನೀರಿನ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಮೊದಲನೇ ಬೆಳೆ ಇಳುವರಿ ಹಂತದಲ್ಲಿ ಹಾನಿಗೊಳಗಾಗಿರುವುದು ಆತಂಕಕ್ಕೆ ಕಾರಣವಾಗಿದೆ. ರೈತರಿಗೆ ಪರಿಹಾರವನ್ನು ಪ್ರಮಾಣಿಕವಾಗಿ ಕೊಡಿಸಲಾಗುವುದು ಎಂದರು.

    ಇದನ್ನೂ ಓದಿ: ರಾಮನಗರಿ ಅಯೋಧ್ಯೆಯಲ್ಲಿ ಇಂದು ದೀಪೋತ್ಸವ; 25 ಲಕ್ಷ ದೀಪಗಳನ್ನು ಹಚ್ಚಿ ದಾಖಲೆ ಬರೆಯಲು ಸಜ್ಜು; ಇಲ್ಲಿದೆ ಕಾರ್ಯಕ್ರಮದ ವೇಳಾಪಟ್ಟಿ

    ಕಂದಾಯ ನಿರೀಕ್ಷಕ ಮಹೇಶ ದಲಾಲ್, ಮುಖಂಡರಾದ ಮನೋಹರಗೌಡ ಹೇರೂರು, ವೀರೇಶ ಬಲ್ಕುಂದಿ, ಅಮರಜ್ಯೋತಿ ನರಸಪ್ಪ, ವಿಶ್ವನಾಥ, ಯಮನೂರಚೌಡ್ಕಿ, ರಮೇಶ ಹೊಸ್ಮಲಿ, ವಿರೂಪಾಕ್ಷಗೌಡ ಹೇರೂರು, ನಾಗರಾಜ್ ಚಳಗೇರಿ, ಬಸವರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts