More

    ದೇಶೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಸಿಎಸ್‌ಕೆ ತಾರೆ ಋತುರಾಜ್ ಗಾಯಕ್ವಾಡ್

    ನವದೆಹಲಿ: ಮಹಾರಾಷ್ಟ್ರದ ಆರಂಭಿಕ ಋತುರಾಜ್ ಗಾಯಕ್ವಾಡ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಗಮನಸೆಳೆದಿದ್ದಾರೆ.

    ಐಪಿಎಲ್ 14ನೇ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಸರ್ವಾಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ 24 ವರ್ಷದ ಋತುರಾಜ್ ಟೂರ್ನಿಯ 3 ಪಂದ್ಯಗಳಲ್ಲಿ ಒಟ್ಟು 414 ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡದ ಕದ ತಟ್ಟಿದ್ದಾರೆ.

    ಶನಿವಾರ ಕೇರಳ ವಿರುದ್ಧ 124 ರನ್ (129 ಎಸೆತ, 9 ಬೌಂಡರಿ, 3 ಸಿಕ್ಸರ್) ಸಿಡಿಸಿದ ಋತುರಾಜ್ ಈ ಮುನ್ನ ಮಧ್ಯಪ್ರದೇಶ ವಿರುದ್ಧ 136 ಮತ್ತು ಛತ್ತೀಸ್‌ಗಢ ವಿರುದ್ಧ 154 ರನ್ ಬಾರಿಸಿದ್ದರು. ಋತುರಾಜ್ ಮುಂದಿನ ಪಂದ್ಯದಲ್ಲೂ ಶತಕ ಸಿಡಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ಸತತ 4 ಶತಕ ಬಾರಿಸಿದ ವಿರಾಟ್ ಕೊಹ್ಲಿ, ದೇವದತ್ ಪಡಿಕಲ್ ಮತ್ತು ಪೃಥ್ವಿ ಷಾ ಅವರ ಭಾರತೀಯ ದಾಖಲೆ ಸರಿಗಟ್ಟಲಿದ್ದಾರೆ.

    ವಿವಾಹದ 4ನೇ ವಾರ್ಷಿಕೋತ್ಸವದಂದು ಕೊಹ್ಲಿಯಿಂದ ಪತ್ನಿಗೆ ವಿಶೇಷ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts